ಬೆಂಗಳೂರು:ಬೆಂಗಳೂರು ಕೇಂದ್ರ ಲೋಕಸಭಾ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಂದು ನಗರದ ಬಿಶಪ್ ಹೌಸ್ನಲ್ಲಿ ಆರ್ಚ್ ಬಿಶಪ್ರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ನಮ್ಮ ನೇರ ಹಣಾಹಣಿ ಬಿಜೆಪಿ ವಿರುದ್ಧ: ರಿಜ್ವಾನ್ ಅರ್ಷದ್ - ಕೇಂದ್ರ ಲೋಕಸಭಾ ಅಭ್ಯರ್ಥಿ ರಿಜ್ವಾನ್ ಅರ್ಷದ್
ನಮ್ಮ ನೇರ ಹಣಾಹಣಿ ಬಿಜೆಪಿ ವಿರುದ್ಧ. ನಾನು ಇನ್ನೂ ಯುವಕನಿದ್ದೇನೆ. ನನಗೆ ಜನ ಮತನೀಡಿ ಸಂಸದನಾಗಿ ಆಯ್ಕೆ ಮಾಡುತ್ತಾರೆ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿಮ್ಮ ವಿರುದ್ಧ ಪ್ರಕಾಶ್ ರೈ ಸಹ ಸ್ಪರ್ಧೆಗಿಳಿದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರಿಜ್ವಾನ್ ಅರ್ಷದ್, ನಮ್ಮ ನೇರ ಹಣಾಹಣಿ ಬಿಜೆಪಿ ವಿರುದ್ಧ. ನಾನಿನ್ನೂ ಯುವಕ. ನನಗೆ ಜನ ಮತನೀಡಿ ಸಂಸದನಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬೆಂಗಳೂರು ನಗರದಲ್ಲಿ ಇಲ್ಲಿವರೆಗೂ ಎರಡ್ಮೂರು ಬಾರಿ ಗೆದ್ದವರು ಯಾವುದೇ ರೀತಿಯ ಅಭಿವೃದ್ಧಿ ಮಾಡಿಲ್ಲ. ಅವರ ಕೊಡುಗೆ ಕ್ಷೇತ್ರಕ್ಕೆ ಶೂನ್ಯ. ಕಳೆದ ಹತ್ತು ವರ್ಷಗಳಲ್ಲಿ ಹಾಲಿ ಸಂಸದರು ಜನರ ಮಧ್ಯ ಕಾಣಿಸಿಕೊಳ್ಳಲಿಲ್ಲ. ಜನರು ಸಂಸದರು ಎಲ್ಲಿ ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಹೀಗಾಗಿ ಈ ಬಾರಿ ನನ್ನನ್ನು ಗೆಲ್ಲಿಸಿ ಎಂದು ರಿಜ್ವಾನ್ ಮನವಿ ಮಾಡಿದರು.