ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತದ ಮುಖವಾಡ ಕಳಚಿ ಬಿದ್ದಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಪ್ರಧಾನಿ 'ಆತ್ಮನಿರ್ಭರ'ದ ಮುಖವಾಡ ಕಳಚಿಬಿದ್ದಿದೆ: ಸಿದ್ದರಾಮಯ್ಯ
ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ'ದ ಮುಖವಾಡ ಕಳಚಿ ಬಿದ್ದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ'ದ ಮುಖವಾಡ ಕಳಚಿ ಬಿದ್ದಿದೆ. ನೀತಿ ನಿರೂಪಣೆ, ಕಾರ್ಯಕ್ರಮಗಳ ಮೇಲುಸ್ತುವಾರಿ ಮತ್ತು ಕುಂದು ಕೊರತೆಗಳ ನಿವಾರಣೆಯ ಕೆಲಸ ಮಾಡುತ್ತಾ, ಕೇಂದ್ರ ಸರ್ಕಾರ ಮತ್ತು ನೇಕಾರರ ನಡುವೆ ಕೊಂಡಿಯಂತಿದ್ದ ಮಂಡಳಿ ರದ್ದತಿ ಖಂಡನೀಯ ಎಂದಿದ್ದಾರೆ.
ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಜು.27ರಂದು ಆದೇಶ ಹೊರಡಿಸಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಪಕ್ಷದ ನಾಯಕರ ಪರವಾಗಿ ಇದೀಗ ಸಿದ್ದರಾಮಯ್ಯ ಕೂಡ ದನಿ ಎತ್ತಿದ್ದಾರೆ.