ಬೆಂಗಳೂರು: ಪಾದರಾಯನಪುರದ ಬಳಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿರುವ ಆರೋಪಿತ ಮುಸ್ಲಿಂ ಬಾಂಧವರಿಗೆ ರಂಜಾನ್ ಪ್ರಯುಕ್ತ ಹಜ್ ಭವನದೊಳಗೆ ಕೆಲ ಧಾರ್ಮಿಕ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ.
ಪಾದರಾಯನಪುರ ಗಲಭೆ ಆರೋಪಿಗಳಿಗೆ ಹಜ್ ಭವನದಲ್ಲಿ ರಂಜಾನ್ ಆಚರಿಸಲು ಅವಕಾಶ!
ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳು ಬಹುತೇಕ ಮುಸ್ಲಿಂ ಸಮುದಾಯದವರಾಗಿದ್ದು, ಹಜ್ ಭವನಕ್ಕೆ ಬಿಗಿ ಭದ್ರತೆ ಒದಗಿಸಿ ಮಾನವೀಯತೆ ದೃಷ್ಟಿಯಿಂದ ರಂಜಾನ್ ಆಚರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಪಾದರಾಯನಪುರದ ಗಲಭೆ ಆರೋಪಿಗಳಿಗೆ ಹಜ್ ಭವನದಲ್ಲಿ ರಂಜಾನ್ ಆಚರಿಸಲು ಅವಕಾಶ!
ಪ್ರತಿ ಶಿಫ್ಟ್ಗೆ 40 ಸಿಬ್ಬಂದಿಯತೆ ಮೂರು ಶಿಫ್ಟ್ನಲ್ಲಿ ಪೊಲೀಸರು ಹಜ್ ಭವನದ ಒಳಗೂ ಹೊರಗೂ ಸರ್ಪಗಾವಲು ಹಾಕಿ ಸಿಸಿಟಿವಿಗಳ ಮೂಲಕ ಹಜ್ ಭವನದ ಒಳಗೆ ಮಾನಿಟರ್ ಮಾಡ್ತಿದ್ದಾರೆ.
ಮತ್ತೊಂದೆಡೆ ಆರೋಪಿಗಳ ಪೈಕಿ ಐವರಿಗೆ ಕೊರೊನಾ ಸೊಂಕು ಪತ್ತೆಯಾದ ಕಾರಣ ಇತರರ ಆರೋಗ್ಯ ತಪಾಸಣೆ ಮಾಡಬೇಕಾಗಿದೆ. ಈ ಹಿನ್ನೆಲೆ ವೈದ್ಯಕೀಯ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಹಜ್ ಭವನದ ಒಳಗಡೆ ಪ್ರವೇಶ ಇಲ್ಲದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.