ಬೆಂಗಳೂರು: ಇಂದಿನಿಂದ ನೀಟ್ ಪಿಜಿ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ನೀಟ್ ಪಿಜಿ: ಅರ್ಹ ಅಭ್ಯರ್ಥಿಗಳಿಗೆ ಆನ್ ಲೈನ್ ನೊಂದಣಿ ಪ್ರಕ್ರಿಯೆ ಶುರು
ಇಂದಿನಿಂದ ನೀಟ್ ಪಿಜಿ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ನವ ದೆಹಲಿಯಎನ್ ಬಿಇ ಸೂಚನೆಯಂತೆ, NEET PG 2019ರ ಕನಿಷ್ಠ ಅರ್ಹತೆಯ ಅಂಕಗಳನ್ನು ಪರಿಷ್ಕರಿಸಿದೆ.. ಈ ಹಿನ್ನೆಲೆಯಲ್ಲಿ PG Medical MD/MS ಕೋರ್ಸ್ ಗಳಿಗೆ ಅರ್ಹಗೊಳ್ಳುವ ಅಭ್ಯರ್ಥಿಗಳು ಮಾತ್ರ ಇಂದು ಸಂಜೆ 8 ಗಂಟೆಯಿಂದ ಮೇ 9 ರ ಸಂಜೆ 8 ರವರಗೆ ಆನ್ ಲೈನ್ ನೊಂದಣಿ ಮಾಡಿಕೊಳ್ಳಬೇಕು. ಮೇ 10 ರಂದು ದಾಖಲಾತಿ ಪರಿಶೀಲನೆಗೆ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಗೂ ನಿಗದಿತ ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸುವುದರೊಂದಿಗೆ ಹಾಜರಾಗಬಹುದಾಗಿದೆ.
NEET- PG 2019 ಮಾಹಿತಿ ಪುಸ್ತಕದಲ್ಲಿ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಗಳನ್ನು ಹಾಗೂ ಇತರೆ ಮಾನದಂಡಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಾಧಿಕಾರದ ವೆಬ್ ಸೈಟ್ Kea.kar.nic.in ನಲ್ಲಿ ನೋಡಬಹುದಾಗಿದೆ.