ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪಿಯು ಕಾಲೇಜುಗಳಲ್ಲಿ ಆನ್‌ಲೈನ್ ಹಾಜರಾತಿ ಕಡ್ಡಾಯಗೊಳಿಸುವಂತೆ ಪಿಯು ಮಂಡಳಿ ಸುತ್ತೋಲೆ ಹೊರಡಿಸಿದೆ.
ಎಲ್ಲಾ ಸರ್ಕಾರಿ/ಖಾಸಗಿ ಅನುದಾನಿತ ಕಚೇರಿ ಹಾಗೂ ಕಾಲೇಜುಗಳಲ್ಲಿ ಆಧಾರ್ ಆಧಾರಿತ ಆನ್‌ಲೈನ್ ಬಯೋಮೆಟ್ರಿಕ್ ಹಾಜರಾತಿಗಾಗಿ (ktpue.attendance.gov.in) ರಿಜಿಸ್ಟರ್ ಮಾಡಿ, ಆನ್‌ಲೈನ್ ಬಯೋಮೆಟ್ರಿಕ್‌ನಲ್ಲಿ ಹಾಜರಾತಿಯನ್ನು ತೆರೆದುಕೊಳ್ಳಲು ಮಂಡಳಿ ಸೂಚಿಸಿತ್ತು. ಆದರೆ, ಆನ್‌ಲೈನ್ ಹಾಜರಾತಿಯನ್ನು ಕೆಲವೊಂದು ಕಚೇರಿ ಹಾಗೂ ಕಾಲೇಜಿನವರು ಬಳಸದೇ ಇರುವುದು ಕಂಡು ಬಂದಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿನದಲ್ಲಿ ಬರುವ ಎಲ್ಲಾ ಕಛೇರಿಗಳು ಮೇ 2 ರಿಂದ ಆನ್ ಲೈನ್ ಹಾಜರಾತಿಯನ್ನ ಕಡ್ಡಾಯ ಈ ಸಂಬಂಧ ಮೇ 2 ರಿಂದ ಸದರಿ ಆನ್‌ಲೈನ್ ಹಾಜರಾತಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ಕಚೇರಿಗಳಿಗೆ ಹಾಗೂ ಸರ್ಕಾರಿ/ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಿಗೆ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ.
ಆನ್‌ಲೈನ್ ಹಾಜರಾತಿಯನ್ನು ಪ್ರತಿ ತಿಂಗಳು ಪರಿಶೀಲಿಸಿ ಉಪಯೋಗಿಸದೇ ಇರುವವರ ಮೇಲೆ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದು, ಮೇ 4ರೊಳಗೆ ಆಧಾರ್ ಆಧಾರಿತ ಆನ್‌ಲೈನ್ ಬಯೋಮೆಟ್ರಿಕ್‌ನಲ್ಲಿ ಹಾಜರಾತಿಯನ್ನು ತೆಗೆದುಕೊಂಡ ಬಗ್ಗೆ ಕಚೇರಿಗೆ ವರದಿ ಮಾಡಲು ತಿಳಿಸಿದೆ.