ಬೆಂಗಳೂರು:ಮಾರಣಾಂತಿಕ ಕಾಯಿಲೆಗಳಿಂದಾಗಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಇಬ್ಬರು ಬಾಲಕರ ಇಚ್ಛೆಯಂತೆ ಒಂದು ದಿನ ಅವರಿಗೆ ಪೊಲೀಸ್ ಆಫೀಸರ್ ಆಗಿ ಸೇವೆ ಸಲ್ಲಿಸಲು ಅವಕಾಶವನ್ನು ಪೊಲೀಸ್ ಇಲಾಖೆ ನೀಡಿತ್ತು. ಈ ಮೂಲಕ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಮಿಥಿಲೇಶ್ (14ವರ್ಷ) ಹಾಗೂ ಮಹಮ್ಮದ್ ಸಲ್ಮಾನ್ ಎಂಬ ಇಬ್ಬರು ಬಾಲಕರು ಮಾರಣಾಂತಿಕ ವ್ಯಾಧಿಗಳಿಂದಾಗಿ ಕಿದ್ವಾಯಿ ಹಾಗೂ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.