ಕರ್ನಾಟಕ

karnataka

By

Published : May 11, 2020, 6:43 PM IST

ETV Bharat / state

ಲಾಕ್​​ಡೌನ್ ಗಡಿಬಿಡಿಯಲ್ಲಿ ಪ್ಲಾಸ್ಟಿಕ್ ನಿಷೇಧ ಸಂಪೂರ್ಣವಾಗಿ ಮರತೇ ಹೋಯ್ತಾ?

ಕೊರೊನ ವೈರಸ್ ಭೀತಿಯ ನಡುವೆ ಅಧಿಕಾರಿಗಳು ಪ್ಲಾಸ್ಟಿಕ್ ನಿಷೇಧದತ್ತ ಗಮನ ಕೊಡದ ಕಾರಣ ಬೆಂಗಳೂರಿನಲ್ಲಿ ಪಾಸ್ಟಿಕ್ ಬಳಕೆ ದ್ವಿಗುಣಗೊಂಡಿದ್ದು, ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ಲಾಸ್ಟಿಕ್ ನಿಷೇಧ ಅಧಿಕಾರಿಗಳು ಏನು ಹೇಳುತ್ತಾರೆ ನೋಡಿ

Official negligence amid fears of corona virus
ಸಂಗ್ರಹ ಚಿತ್ರ

ಬೆಂಗಳೂರು:ದೇಶದಲ್ಲಿ ಮಹಾಮಾರಿ ಕೊರೊನ ವೈರಸ್ ಭೀತಿಯಿಂದಲೇ ಲಾಕ್​​ಡೌನ್ ವಿಧಿಸಲಾಗಿದೆ. ನಗರದ ಜನ ಲಾಕ್​​ಡೌನ್ ಗಡಿಬಿಡಿಯಿಂದ ಪ್ಲಾಸ್ಟಿಕ್ ನಿಷೇಧವನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದಾರೆ..!

ಹೋಟೆಲ್​ಗಳಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆ ಇರುವ ಕಾರಣ ಪ್ಲಾಸ್ಟಿಕ್ ಬಳಕೆ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ಲಾಸ್ಟಿಕ್ ನಿಷೇಧ ಅಧಿಕಾರಿಗಳು ಮಾಹಿತಿ ಕೊಟ್ಟರು. ಪ್ಲಾಸ್ಟಿಕ್ ಬಳಕೆ ಹೆಚ್ಚಾಗುವ ಜೊತೆಗೆ ಮನೆಯಲ್ಲಿ ಕಸವಿಂಗಡನೆ ಆಗುತ್ತಿಲ್ಲ, ಲಾಕ್​​ಡೌನ್ ಆಗುವ ಹಿಂದೆ ಕೆಲಸಕ್ಕೆ ಹೋಗಬೇಕು, ಹೀಗಾಗಿ ಕಸವಿಂಗಡನೆ ಮಾಡಲು ಕಷ್ಟವಾಗುತ್ತದೆ ಎಂದು ಜನರು ನೆಪ ಒಡ್ಡುತ್ತಿದ್ದರು.

ಆದರೆ, ಈಗ ನಗರದ ಜನ ಮನೆಯಲ್ಲೇ ಇದ್ದರು ಕಸವಿಂಗಡನೆ ಮಾಡದೇ ಬಹುಪಾಲು ಮನೆಗಳಿಂದ ಕಸದರಾಶಿಯನ್ನು ಸುರಿಯುತ್ತಲೇ ಇದ್ದಾರೆ ಎಂದು ಪಾಲಿಕೆಯ ಮೂಲಗಳು ತಿಳಿಸುತ್ತಿವೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗುವುದರ ಜೊತೆಗೆ ಇದರ ಕಡಿವಾಣಕ್ಕೆ ಏನು ಮಾಡಬೇಕು ಎನ್ನುವುದರ ಬಗ್ಗೆ ಕೆಲವು ಕಾರಣಗಳನ್ನು ಸಹ ನೀಡಿದ್ದಾರೆ.

ಸಂಗ್ರಹ ಚಿತ್ರ

ಸರ್ಕಾರದ ನಿರ್ಲಕ್ಷ:

ಹೌದು, ಜನರು ಕಸದ ವಿಂಗಡನೆ ಮಾಡುತ್ತಿಲ್ಲ. ಆದರೆ, ಪ್ಲಾಸ್ಟಿಕ್ ನಿಷೇಧ ಈಗಾಗಲೇ ದೇಶದಲ್ಲಿ ಆಗಿದ್ದು ಇದರ ಕುರಿತಾಗಿ ಸರ್ಕಾರ ಹದ್ದಿನಕಣ್ಣು ಇಡುವ ಜವಾಬ್ದಾರಿ ಹೊಂದಿರುತ್ತದೆ. ಪ್ಲಾಸ್ಟಿಕ್ ಮಾರಾಟ ಯಾರು ಮಾಡುತ್ತಿದ್ದಾರೆ ಹಾಗೂ ಯಾರು ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ತನ್ನ ಬಳಿ ಇದ್ದರೂ ಕೈಕಟ್ಟಿ ಕೂತಿದೆ. ಪಾಲಿಕೆಯ ಅಧಿಕಾರಿಗಳು ಮಹಾಮಾರಿ ಕೊರೊನ ವೈರಸ್ ತಡೆಗಟ್ಟಲು ನಿರತರಾಗಿದ್ದಾರೆ. ಆದರೆ, ಪ್ರಕೃತಿಯನ್ನೇ ತಿನ್ನುವ ಈ ಪ್ಲಾಸ್ಟಿಕ್ ಬಗ್ಗೆಯೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು.

ಲಾಕ್​​ಡೌನ್ ಪರಿಸ್ಥಿತಿಯ ದುರ್ಬಳಕೆ:

ದೇಶದಲ್ಲಿ ಲಾಕ್​​ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರಿಗಳು ಮಹಾಮಾರಿಯ ವಿರುದ್ಧ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಕೈಗಾರಿಕೆಗಳು ಪೀಣ್ಯ ಬಿಡದಿ ಹಾಗೂ ಬೆಂಗಳೂರು ಹೊರವಲಯದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಎಲ್ಲರ ಸಹಕಾರ ಇದ್ದರೆ ಮಾತ್ರ ಪ್ಲಾಸ್ಟಿಕ್ ನಿಷೇಧ ಆಗುವುದು:

ಊಟವನ್ನು ಹೋಂ ಡೆಲಿವರಿ ಮಾಡುತ್ತಿರುವ ಸ್ವಿಗ್ಗಿ, ಜೊಮ್ಯಾಟೋ ಹಾಗೂ ಇನ್ನಿತರ ಖಾಸಗಿ ಸಂಸ್ಥೆಗಳು ಪ್ಲಾಸ್ಟಿಕ್ ನಿಷೇಧಕ್ಕೆ ಕೈಜೋಡಿಸಬೇಕು. ಇದರ ಜೊತೆಗೆ ಹೋಟೆಲ್​​ಗಳು ಪ್ಲಾಸ್ಟಿಕ್ ಬದಲಾಗಿ ನೈಸರ್ಗಿಕವಾಗಿ ಮಾಡಿದ ಡಬ್ಬಿಗಳನ್ನು ಪಾರ್ಸಲ್ ನೀಡುವುದಕ್ಕೆ ಪ್ರಾರಂಭಿಸಬೇಕು.

ಒಟ್ಟಾರೆಯಾಗಿ ಪ್ರಕೃತಿಯನ್ನು ಉಳಿಸಬೇಕಾದರೆ ಪ್ಲಾಸ್ಟಿಕ್ ನಿಷೇಧವನ್ನು ಸಂಪೂರ್ಣವಾಗಿ ಜಾರಿಮಾಡಬೇಕು. ಇದಕ್ಕೆ ಸಾರ್ವಜನಿಕರು ಖಾಸಗಿ ಸಂಸ್ಥೆಗಳು ಹೋಟೆಲ್​​ಗಳು ಹಾಗೂ ಸರ್ಕಾರ ಒಟ್ಟಿಗೆ ಶ್ರಮಿಸಬೇಕು.

ABOUT THE AUTHOR

...view details