ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿ ಅಂಡರ್ ಪಾಸ್​ಗಳು ಈಗ ಸ್ವಚ್ಛ ,ಸುಂದರ..! - kannadanews

ಸಿಲಿಕಾನ್ ಸಿಟಿಯಲ್ಲಿರೋ ಕೆಲ ಅಂಡರ್ ಪಾಸ್​ಗಳನ್ನು ಬೆಂಗಳೂರು ಮಂದಿ ಸ್ವಚ್ಛಗೊಳಿಸಿ ,ಪೇಟಿಂಗ್ ಮಾಡಿ,ಬಣ್ಣ ಬಳಿದು ಸ್ವಚ್ಛಗೊಳಿಸಿ ಅಂದವಾಗಿ ಕಾಣುವಂತೆ ಮಾಡಿದ್ದಾರೆ.

ಸಿಲಿಕಾನ್​ ಸಿಟಿ ಅಂಡರ್ ಪಾಸ್​ಗಳು ಈಗ ಸ್ವಚ್ಛ ,ಸುಂದರ

By

Published : Jun 16, 2019, 9:34 AM IST

Updated : Jun 16, 2019, 2:43 PM IST

ಬೆಂಗಳೂರು :ನಗರದಲ್ಲಿರುವ ಕೆಲ ಅಂಡರ್ ಪಾಸ್​ಗಳಲ್ಲಿ ತರಾತುರಿಯಲ್ಲಿ ಅರ್ಧಂಬರ್ಧ ಬಣ್ಣ ಬಳಿದಿದ್ದು ಅರ್ಧಕ್ಕೆ ಬಿಟ್ಟಿದ್ದ ಅಂಡರ್​ ಪಾಸ್​ಗಳನ್ನು ಬೆಂಗಳೂರು ನಾಗರಿಕರು ಸ್ವಚ್ಛ ಮಾಡಿ ಅದನ್ನು ಪೂರ್ಣಗೊಳಿಸಿ ಅಂದಚಂದಗೊಳಿಸಿದ್ದಾರೆ.

ಮೆಟ್ರೋ ಪಿಲ್ಲರ್ ಗಳ ಹಾಗೂ ಅಂಡರ್ ಪಾಸ್ ಗಳ ಅಂದ ಚೆಂದವನ್ನು ಈಗ ನಾಗರಿಕರು ಹೆಚ್ಚಿಸಿದ್ದಾರೆ. ಬ್ರಿಗೇಡ್ ಗ್ರೂಪ್ ಹಾಗೂ ಆಗ್ಲಿ ಇಂಡಿಯಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೈಗೆ ಗ್ಲೌಸ್​ ಹಾಗೂ ಕೋಟ್ ಧರಿಸಿ ಅಂಡರ್ ಪಾಸ್ ಗೋಡೆಗಳಿಗೆ ಬಣ್ಣ ಹಚ್ಚಿ ಡಿಸೈನ್ ಮಾಡಿದರು. ಸುಮಾರು 50 ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ಕೆ ಸಾಥ್ ಕೊಟ್ಟರು .

ಸಿಲಿಕಾನ್​ ಸಿಟಿ ಅಂಡರ್ ಪಾಸ್​ಗಳು ಈಗ ಸ್ವಚ್ಛ ,ಸುಂದರ

ಹೀಗೆ ಸ್ವಚ್ಛ ಮಾಡಿ ಬಣ್ಣ ಬಳಿಯೋದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ , ಉಗುಳದೆ ಸ್ವಚ್ಛತೆಯನ್ನು ಕಾಪಾಡುತ್ತಾರೆ. ಹೀಗಾಗಿ ಡಿಸೈನ್ ಜೊತೆಗೆ ಫೈಟಿಂಗ್ ಮಾಡೋದು ಮುಖ್ಯ ಅಂತಾರೆ ಬ್ರಿಗೇಡ್ ಉದ್ಯೋಗಿಗಳು. ಪ್ರತಿ ವರ್ಷ ಬ್ರಿಗೇಡ್ ಗ್ರೂಪ್, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಂಗವಾಗಿ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತೆ . ಈ ಬಾರಿ ಸ್ವಚ್ಛತೆ ಜೊತೆಗೆ ಪೇಂಟಿಂಗ್ಸ್ ಮಾಡಿ ಬೆಂಗಳೂರನ್ನು ಅಂದಗೊಳಿಸಲು ಪಣತೊಟ್ಟು,ಪೇಟಿಂಗ್ಸ್ ಜೊತೆಗೆ ಸ್ವಚ್ಛತಾ ಕೆಲಸವನ್ನು ಮಾಡುತ್ತಾ ಎಲ್ಲರಿಗೂ ಅರಿವು ಮೂಡಿಸಿದ್ರು.

Last Updated : Jun 16, 2019, 2:43 PM IST

For All Latest Updates

ABOUT THE AUTHOR

...view details