ಕರ್ನಾಟಕ

karnataka

ETV Bharat / state

ಜೈಲಿಂದ ಬಿಡುಗಡೆಯಾಗಿ 15 ದಿನದಲ್ಲೇ ಹಳೇ ಚಾಳಿ: ರೌಡಿ ಬ್ರದರ್ಸ್‌ ಮತ್ತೆ ಅರೆಸ್ಟ್‌ - ನಟೋರಿಯಸ್ ರೌಡಿ ಸಹೋದರರ ಬಂಧನ

ಕುಖ್ಯಾತ ರೌಡಿ ಶೀಟರ್ ಸಹೋದರರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

rowdy brothers arrested
ಸಂಜು ಹಾಗೂ ವೀರು ಬಂಧಿತರು

By

Published : Sep 9, 2022, 9:48 AM IST

Updated : Sep 9, 2022, 9:57 AM IST

ಬೆಂಗಳೂರು:ಜೈಲಿನಿಂದ ಬಿಡುಗಡೆಗೊಂಡು ಸರಿಯಾಗಿ 15 ದಿನಗಳೇ ಕಳೆದಿಲ್ಲ, ಅದಾಗಲೇ ಮಾರಕಾಸ್ತ್ರ ಝಳಪಿಸಿದ್ದ ಕುಖ್ಯಾತ ರೌಡಿಶೀಟರ್ ಸಹೋದರರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದಲ್ಲಿ ನಟೋರಿಯಸ್​​ಗಳಾಗಿ ಗುರುತಿಸಿಕೊಂಡಿರುವ ಸಂಜು ಹಾಗೂ ವೀರು ಬಂಧಿತ ಸಹೋದರರು.

ಕುಳ್ಳು ರಿಜ್ವಾನ್ ಸಹಚರರಾಗಿರುವ ಸಂಜು ಹಾಗೂ ವೀರು ಹದಿನೈದು ದಿನಗಳ‌ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು. ಬಳಿಕ ಒಂದು ವಾರದ ಹಿಂದಷ್ಟೇ ಮುನೇಶ್ವರ ಬ್ಲಾಕ್ ಬಳಿ ವಿರೋಧಿ ಬಣದ ಮನೋಜ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಠಾಣಾ ಪೊಲೀಸರು ಇದೀಗ ಆರೋಪಿ ಸಹೋದರರನ್ನು ಮಟ್ಟ ಹಾಕಿದ್ದಾರೆ.

ಇದನ್ನೂ ಓದಿ:ಚಿನ್ನದ ಸರ ಕಳವು, ಖೋಟಾ ನೋಟುಗಳ ತಯಾರಿಕಾ ಜಾಲ ಪತ್ತೆ: ಕೇರಳ ಮೂಲದ ಆರೋಪಿಗಳ ಬಂಧನ

Last Updated : Sep 9, 2022, 9:57 AM IST

ABOUT THE AUTHOR

...view details