ಕರ್ನಾಟಕ

karnataka

ETV Bharat / state

ಟಿಪ್ಪು ಪಠ್ಯದ ಬಗ್ಗೆ ವರದಿ ನೀಡಲು ಸೂಚಿಸಲಾಗಿದೆ: ಸಚಿವ ಸುರೇಶ್ ಕುಮಾರ್ - ಶಿಕ್ಷಣ ಸಚಿವ ಸುರೇಶ್​ ಕುಮಾರ್

ರಾಜ್ಯದಲ್ಲಿ ಈಗ ಟಿಪ್ಪು ಸುಲ್ತಾನ್​​ ಪಠ್ಯದ್ದೆ ಮಾತು. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

ಟಿಪ್ಪು ಪಠ್ಯದ ಬಗ್ಗೆ ವರದಿ ನೀಡಲು ಸೂಚಸಲಾಗಿದೆ: ಸಚಿವ ಸುರೇಶ್ ಕುಮಾರ್

By

Published : Oct 31, 2019, 1:39 PM IST

ಬೆಂಗಳೂರು:ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್​ ವಿಷಯವನ್ನು ತೆಗೆಯುವಂತೆ ಅಪ್ಪಚ್ಚು ರಂಜನ್ ದೂರು ನೀಡಿದ್ದು, ಅದನ್ನು ಪರಿಶೀಲಿಸುವಂತೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ಸೂಚಿಸಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಸಭೆ ನಡೆಸಲು ತಿಳಿಸಿದ್ದೇನೆ. ನವೆಂಬರ್ 7ರಂದು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಸಭೆಯಿದೆ. ವರದಿ ನಂತರ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದರು .

ಟಿಪ್ಪು ಪಠ್ಯದ ಬಗ್ಗೆ ವರದಿ ನೀಡಲು ಸೂಚಸಲಾಗಿದೆ: ಸಚಿವ ಸುರೇಶ್ ಕುಮಾರ್

ಕೊಡಗಿನ ಶಾಸಕರೊಬ್ಬರು ದೂರು ಕೊಟ್ಟಿದ್ದಾರೆ. ಶಾಸಕರು ಕೊಟ್ಟ ಮನವಿ ಪರಿಗಣಿಸಲೇ ಬೇಕಲ್ಲ. ಅಪ್ಪಚ್ಚು ರಂಜನ್ ರನ್ನೂ ಕರೆಸಿ ಅವರ ವಾದ ಕೇಳುತ್ತೇವೆ‌. ಅವರು ಯಾವ ಕಾರಣಕ್ಕೆ ಟಿಪ್ಪು ಪಠ್ಯ ತೆಗೆಯಬೇಕು. ಅದಕ್ಕೆ ಆಧಾರ ಏನು ಈ ಬಗ್ಗೆ ಸಮಿತಿಯಲ್ಲಿ ಪರಿಶೀಲನೆ ನಡೆಸುವಂತೆ ತಿಳಿಸಿದ್ದೇನೆ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details