ಕರ್ನಾಟಕ

karnataka

ETV Bharat / state

ಬಿಡಿಎ ಬಿಡಲು ಒಪ್ಪದ ಪೊಲೀಸರು: ಮಾತೃ ಇಲಾಖೆಗೆ ವಾಪಸಾಗಲು ನೋಟಿಸ್ - ಪೊಲೀಸ್ ಸಿಬ್ಬಂದಿ

ಕೊರೊನಾ ಹಿನ್ನೆಲೆಯಲ್ಲಿ ಪೊಲೀಸರ ಅಗತ್ಯತೆ ಮಾತೃ ಇಲಾಖೆಗೆ ಇರುವುದರಿಂದ ಈ ನೋಟಿಸ್ ಹೊರಡಿಸಲಾಗಿದೆ. ಮೂವರು ಹೆಡ್ ಕಾನ್ಸ್​​​​​ಟೇಬಲ್, ಇಬ್ಬರು ಸಿವಿಲ್ ಹೆಡ್ ಕಾನ್ಸ್​ಟೇಬಲ್, ಒಬ್ಬರು ಎಸಿಬಿಯವರು ನಿಯೋಜನೆ ಅವಧಿ ಮೀರಿ ಬಿಡಿಎದಲ್ಲಿ ಕೆಲಸ ಮಾಡುತ್ತಿದ್ದಾರೆ.

Police
ಪೊಲೀಸ್

By

Published : Jun 13, 2020, 10:19 AM IST

ಬೆಂಗಳೂರು: ಬಿಡಿಎ ಬಿಟ್ಟು ಹೋಗಲು ಮನಸ್ಸಿಲ್ಲದ ಪೊಲೀಸ್ ಸಿಬ್ಬಂದಿ ನಿಯೋಜನಾ ಅವಧಿ ಮೀರಿ ಬಿಡಿಎಯಲ್ಲಿಯೇ ಕರ್ತವ್ಯದಲ್ಲಿ ಮುಂದುವರೆಸಿದ್ದಾರೆ. ಮಾತೃ ಇಲಾಖೆಗೆ ವಾಪಸ್ ಆಗದ ಪೊಲೀಸರಿಗೆ ನೋಟಿಸ್ ಮೂಲಕ ಪೊಲೀಸ್ ಆಯುಕ್ತರು ಚಾಟಿ ಬೀಸಿದ್ದಾರೆ.

ಬಿಡಿಎಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ನೋಟಿಸ್

ಕೊರೊನಾ ಹಿನ್ನೆಲೆಯಲ್ಲಿ ಪೊಲೀಸರ ಅಗತ್ಯತೆ ಮಾತೃ ಇಲಾಖೆಗೆ ಇರುವುದರಿಂದ ಈ ನೋಟಿಸ್ ಹೊರಡಿಸಿದ್ದಾರೆ. ಮೂವರು ಹೆಡ್ ಕಾನ್ಸ್​​​​ಟೇಬಲ್, ಇಬ್ಬರು ಸಿವಿಲ್ ಹೆಡ್ ಕಾನ್ಸ್​ಟೇಬಲ್, ಒಬ್ಬರು ಎಸಿಬಿಯವರು ನಿಯೋಜನೆ ಅವಧಿ ಮೀರಿ ಕೆಲಸ ಮಾಡುತ್ತಿದ್ದಾರೆ. ಅವರುಗಳು ತಕ್ಷಣವೇ ಮಾತೃ ಇಲಾಖೆಗೆ ವರದಿ ಮಾಡದಿದ್ದರೆ ಕೆಎಸ್​ಪಿಡಿಪಿ ನಿಯಮಾನ್ವಯ ಶಿಸ್ತುಕ್ರಮ ಕೈಗೊಳ್ಳಲಾಗುವುದು.

ಹೀಗಾಗಿ ತಕ್ಷಣವೇ ಈ ಸಿಬ್ಬಂದಿಯನ್ನ ಬಿಡಿಎಯಿಂದ ಕಾರ್ಯಮುಕ್ತಿಗೊಳಿಸುವಂತೆ ಬಿಡಿಎ ಆಯುಕ್ತರಿಗೆ, ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರ ಬರೆದಿದ್ದಾರೆ.

ಇಂದು ಸಂಜೆಯೊಳಗೆ ಇಲಾಖೆಗೆ ವಾಪಸ್ ಆಗಿ ಎಂದು ವಾರ್ನಿಂಗ್ ಕೂಡಾ ನೀಡಲಾಗಿತ್ತು. ನಾಗೇಂದ್ರ, ಮಂಜು ಸಿಆರ್, ಮಧು ಎಂಕೆ, ಎಸ್ ರಮೇಶ್, ಲಕ್ಷ್ಮಣ್, ಚಿಕ್ಕರಾಮಯ್ಯ ಎನ್ ಅವರಿಗೆ ಈ ನೋಟಿಸ್ 13 ದಿನದ ಹಿಂದೆ ಕಳುಹಿಸಿದರೂ ಕ್ಯಾರೇ ಅನ್ನದೇ ಬಿಡಿಎಯಲ್ಲೇ ಮುಂದುವರೆದಿದ್ದಾರೆ.

ABOUT THE AUTHOR

...view details