ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ಮೇರೆಗೆ ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಹೀಗಾಗಿ ಮನ್ಸೂರ್ ಖಾನ್ ಸ್ನೇಹಿತ ಅಬ್ಬಾಸ್ಗೆ ಎಸ್ಐಟಿಯಿಂದ ನೋಟಿಸ್ ಜಾರಿಯಾಗಿದೆ.
ಐಎಂಎ ವಂಚನೆ ಪ್ರಕರಣ: ಮನ್ಸೂರ್ ಸ್ನೇಹಿತನಿಗೆ ಎಸ್ಐಟಿ ನೋಟಿಸ್ - ಎಸ್ಐಟಿ ತನಿಖೆ
ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಸ್ನೇಹಿತ ಅಬ್ಬಾಸ್ ಅವರಿಗೆ ಎಸ್ಐಟಿ ನೋಟಿಸ್ ನೀಡಿದೆ. 38 ಕೆಜಿ ಬಂಗಾರ ಕರಗಿಸಿ ನೀಡಲಾಗಿದೆ ಎನ್ನಲಾದ ₹ 9 ಕೋಟಿ ರೂಪಾಯಿ ಹಣದ ಮಾಹಿತಿ ಕೇಳಿದೆ.
ಐಎಂಎ ಪ್ರಕರಣದ ಆರೋಪಿ ಮನ್ಸೂರ್ ಖಾನ್
ಮನ್ಸೂರ್ಖಾನ್ ಹಾಗೂ ಅಬ್ಬಾಸ್ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದವರು. ಹೀಗಾಗಿ ಮನ್ಸೂರ್ ಐಎಂಎ ವಂಚನೆ ಬೆಳಕಿಗೆ ಬರುತ್ತಿದ್ದಂತೆ ಅಬ್ಬಾಸ್ಗೆ ₹ 9 ಕೋಟಿ ಅನ್ನು ನೀಡಿದ್ದಾನೆ. ಅದು ಕೂಡ ಐಎಂಎ ಆಭರಣದ 38 ಕೆಜಿ ಚಿನ್ನ ಕರಗಿಸಿ ನೀಡಿದ್ದಾನೆ ಎನ್ನಲಾಗ್ತಿದೆ.
ಸದ್ಯ ಅಬ್ಬಾಸ್ ದುಬೈನಲ್ಲಿ ವಾಸವಾಗಿದ್ದು. ಮನ್ಸೂರ್ ನೀಡಿದ ₹ 9 ಕೋಟಿ ಹಣದ ಮಾಹಿತಿಯನ್ನು ನೀಡುವಂತೆ ಎಸ್ಐಟಿ ತಿಳಿಸಿದೆ. ಸಿಬಿಐಗೆ ಕೇಸ್ ವರ್ಗಾವಣೆ ಆಗಿರುವ ಕಾರಣ ಒಂದು ವೇಳೆ ಅಬ್ಬಾಸ್ ವಿಚಾರಣೆಗೆ ಹಾಜರಾದರೆ ಸಿಬಿಐ ಅಧಿಕಾರಿಗಳು ಹಾಗೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸುವ ಸಾಧ್ಯತೆಯಿದೆ.