ಕರ್ನಾಟಕ

karnataka

ETV Bharat / state

ರಾಜೀನಾಮೆ ಕೊಡ್ತೀನಿ ಎಂದು ಎಲ್ಲಿಯೂ ಹೇಳಿಲ್ಲ: ರಾಜೀನಾಮೆ ಕೇವಲ ವಾಟ್ಸ್​ಆ್ಯಪ್​ ಯೂನಿವರ್ಸಿಟಿ ಸೃಷ್ಟಿ: ಬಿ ಕೆ ಹರಿಪ್ರಸಾದ್ - ವೀರಪ್ಪ ಮೊಯಿಲಿ

ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್ ಹಾಗೂ ಸುರ್ಜೇವಾಲಾಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದರೂ ಸುಳ್ಳು. ನನ್ನ ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೂ ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

BK Hariprasad spoke to journalists.
ವಿಪ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಪತ್ರಕರ್ತರೊಂದಿಗೆ ಮಾತನಾಡಿದರು.

By

Published : May 27, 2023, 9:33 PM IST

ರಾಜೀನಾಮೆ ಕೊಡ್ತೀನಿ ಎಂದು ಎಲ್ಲಿಯೂ ಹೇಳಿಲ್ಲ

ಬೆಂಗಳೂರು:ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನು ಮಾಡುವುದು ಸಂಪ್ರದಾಯ, ಪದ್ದತಿ ಹಿಂದಿನಿಂದಲೂ ಇತ್ತು. ಆ ಸಂಪ್ರದಾಯ ಮುರಿದಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್​ನಲ್ಲಿ ಸಭಾನಾಯಕರನ್ನಾಗಿ ಯಾರನ್ನೂ ಮಾಡಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ. ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದೆಲ್ಲ ವಾಟ್ಸ್​ಆ್ಯಪ್​ ಯುನಿವರ್ಸಿಟಿಯಲ್ಲಿ ಸೃಷ್ಟಿಯಾದಂತಹದ್ದು ಎಂದು ಪ್ರತಿಕ್ರಿಯೆ ನೀಡಿದರು.

ನನ್ನ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿಯವರು ನನ್ನ ಮೇಲೆ ಜವಾಬ್ದಾರಿ ಕೊಟ್ಟು ಪರಿಷತ್ ಸದಸ್ಯತ್ವ ಸ್ಥಾನ ನೀಡಿದ್ದಾರೆ. ಅದನ್ನು ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಸೋನಿಯಾಗಾಂಧಿ ಹಾಗೂ ಸಭಾಪತಿಯವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ,ನಾನು ಪರಿಷತ್ ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆ ಎಂದು ಹೇಳಿದರು.

ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಿಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನು ಓಲೈಸಿಕೊಳ್ಳಲು ಮಾತ್ರ, ಯಾರೇ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದರೂ ಅದು ಸುಳ್ಳು. ನನ್ನ ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೂ, ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ ಎಂದು ಹೇಳಿದರು.

ನಾನು ಸರ್ವಧರ್ಮ ಸಮ ಬಾಳ್ವೆಯಲ್ಲಿ ನಂಬಿಕೆ ಇಟ್ಟವನು. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೆ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರ್ತಿನಿ. ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ.ಯಾವ ಸಂಕೋಚವೂ ಇಲ್ಲ, ತಾಪತ್ರಯವೂ ಇಲ್ಲ ಎಂದು ಹೇಳಿದರು.

ಪಕ್ಷದಲ್ಲಿ ಎಲ್ಲರೂ ಅವರವರ ರೀತಿಯಲ್ಲಿ ಪಕ್ಷಕ್ಕಾಗಿ ದುಡಿದಿರುತ್ತಾರೆ. ನಾನು ಪಕ್ಷ ಕಟ್ಟಿದವನು. ರಾಜೀನಾಮೆ ವಿಷಯ ಎಲ್ಲಿಂದ ಹುಟ್ಟಿದೆ ಗೊತ್ತಿಲ್ಲ. ರಾಜೀನಾಮೆ ಕೊಡಲು ನಾನು ಬಾಡಿಗೆ ಮನೆಯಿಂದ ಬಂದವನಲ್ಲ ಸ್ವಂತ ಮನೆಯಲ್ಲಿದ್ದೇನೆ ಎಂದರು.

ವೀರಪ್ಪ ಮೊಯಿಲಿಯವರ ಮಾತಿಗೆ ನಾನೇನು ಹೇಳೊಲ್ಲ. ಅವರ ಜ್ಞಾನಭಂಡಾರ ಇರುವಂತವರು. ಅವರ ಮಾತಿಗೆ ನಾನೇನು ಹೇಳೊಲ್ಲ. ನಾನೂ ಪಕ್ಷ ಕಟ್ಟಿದವನು. ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತಗೊಂಡು ಬಂದವನು. ಈ ಮನೆ ಬಿಟ್ಟು ಹೋಗೋದಕ್ಕೆ ಅಥವಾ ಧ್ವಂಸ ಮಾಡೊದಕ್ಕೆ ರಾಜೀನಾಮೆಯೆಲ್ಲ ವಾಟ್ಸ್​ಆ್ಯಪ್​ ಯೂನಿವರ್ಸಿಟಿ ಸೃಷ್ಠಿ. ಪಕ್ಷದಲ್ಲಿ ಸಕ್ರಿಯ ವಾಗಿರುವವರಿಗೆ ಮಣೆ ಹಾಕುವುದು ಪದ್ದತಿ. ಸಾಂದರ್ಭಿಕವಾಗಿ ನಾನು ಹೇಳಬೇಕಾದಾಗ ಹೇಳ್ತೀನಿ. ಪಕ್ಷ ನಿಷ್ಠೆ ವಿಷಯ ಹಲವಾರು ಆಯಾಮಗಳಿದೆ. ಕಾಲ ನಿರ್ಧಾರ ಮಾಡಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಿ ಕೆ ಶಿವಕುಮಾರ್ ಕಾಂಗ್ರೆಸ್​​ನಲ್ಲಿ ಸಿಎಂ ಆಗ್ತಾರೆ ಎಂದು ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಕಡೆ ಬಂತು. ಜೆಡಿಎಸ್‌ನ ಮತಗಳೆಲ್ಲ ಕಾಂಗ್ರೆಸ್‌ ಕಡೆ ಬಂದಿದೆ. ಅದರಿಂದ ಜೆಡಿಎಸ್ ಮತಗಳು ಕುಸಿದಿದೆ. ಒಕ್ಕಲಿಗ ಸಮುದಾಯದ ನಾಯಕತ್ವ ನಮಗೆ ಇರಲಿಲ್ಲ. ಡಿ.ಕೆ.ಶಿವಕುಮಾರ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಮಾಡಿದಾಗ, ಅವರು ಸಿಎಂ ಆಗ್ತಾರೆ ಎಂದಾಗ ಒಕ್ಕಲಿಗ ವೋಟ್​ ಕಾಂಗ್ರೆಸ್‌ ಗೆ ಬಂದಿದೆ. ಡಿ.ಕೆ.ಶಿವಕುಮಾರ್ ಅವರನ್ನು ಈಗ ಡಿಸಿಎಂ ಮಾಡಿದ್ದಾರೆ. ಪಕ್ಷ ಭರವಸೆ ಕೊಟ್ಟ ಗ್ಯಾರಂಟಿಗಳನ್ನು ಸರ್ಕಾರ ನೂರಕ್ಕೆ ನೂರು ಈಡೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾವ ಅನುಮಾನವೂ ಬೇಡ. ಗ್ಯಾರಂಟಿಗಳ ಬಗ್ಗೆ ಅಂಕಿ ಅಂಶ ಸಂಗ್ರಹಿಸುತ್ತಿದ್ದಾರೆ. ಸರ್ಕಾರದ ನೀತಿ ನಿಯಮದ ಏನು ಮಾಡಬೇಕೆಂದು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಅದು ಬಂದ ನಂತರ ಗ್ಯಾರಂಟಿ ಖಂಡಿತ ಜಾರಿಯಾಗುತ್ತೆ. ಲೋಕಸಭೆಯಾದ ನಂತರ ಸರ್ಕಾರ ಪತನವಾಗಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಗಲು ಕನಸನ್ನು ಕುಮಾರ ಸ್ವಾಮಿಯವರು ಕಾಣ್ತಿದ್ದಾರೆ. ಇಷ್ಟು ದಿನ ರಾತ್ರಿ ಹಗಲು ನಿದ್ದೆ ಇರ್ತಿರಲಿಲ್ಲ. ಈಗ ಹಗಲು ರಾತ್ರಿ ನಿದ್ದೆ ಮಾಡ್ತಿದ್ದಾರೆ. ಹೀಗಾಗಿ ಹಗಲು ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.

ಇದನ್ನೂಓದಿ:ಕರ್ನಾಟಕದ ಜನತೆ ಸುಟ್ಟ ಬರೆ ಎಳೆದರೂ ಬಿಜೆಪಿಗೆ ಬುದ್ಧಿ ಬಂದಿಲ್ಲ: ಸಿಎಂ ಕೆಸಿಆರ್​ ಗರಂ

ABOUT THE AUTHOR

...view details