ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಕೊರೊನಾ ಎರಡನೇ ಅಲೆ ಸಂಕಷ್ಟಕ್ಕೆ ಸಿಲುಕಿದ್ದ ಕೊರೊನಾ ವಾರಿಯರ್ಸ್ ಮತ್ತು ನಾಗರಿಕರಿಗೆ ಸೇರಿ ಸುಮಾರು 8,000 ಕುಟುಂಬಗಳಿಗೆ ರೇಷನ್ ಕಿಟ್ಗಳನ್ನು ವಿತರಿಸಲಾಯಿತು. ಈ ವೇಳೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನ, ಮಾಸ್ಕ್ ಧರಿಸದೇ ರೇಷನ್ ಕಿಟ್ ಕೊಡಲಾರಂಭಿಸಿದಾಗ ಗುಂಪು ಗುಂಪಾಗಿ ದಿನಸಿ ಪದಾರ್ಥವನ್ನು ಪಡೆಯಲು ಮುಗಿಬಿದ್ದರು.
ಡಿಕೆಶಿ, ಸಿದ್ದರಾಮಯ್ಯ ಫುಡ್ ಕಿಟ್ ವಿತರಣೆಯಲ್ಲಿ ಸಾಮಾಜಿಕ ಅಂತರ ಮಾಯ - ಡಿ.ಕೆ.ಶಿ, ಸಿದ್ದರಾಮಯ್ಯ ಫುಡ್ ಕಿಟ್ ವಿತರಣೆ
ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಸಾಮಾಜಿಕ ಅಂತರ ಮಾಯವಾಗಿತ್ತು. ಪೊಲೀಸರು ಏನೂ ಮಾಡಲಾಗದೇ ಅಸಹಾಯಕರಾಗಿ ಮೂಕ ಪ್ರೇಕ್ಷಕರಂತೆ ನಿಲ್ಲುವಂತಾಯ್ತು. ಆದರೂ ವಿಡಿಯೋ ಸೆರೆ ಹಿಡುದು ಠಾಣೆಗೆ ಕರೆಸಿ ವಾರ್ನ್ ಮಾಡಿ ದಂಡ ಹಾಕುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ರೇಷನ್ ಪಡೆದುಕೊಳ್ಳುವಂತೆ ಅದೆಷ್ಟೇ ಹೇಳಿದರೂ ಯಾರೊಬ್ಬರೂ ಕೇರ್ ಮಾಡಲಿಲ್ಲ, ಎಲ್ಲಿ ರೇಷನ್ ಕಿಟ್ಗಳು ಖಾಲಿಯಾಗುತ್ತವೆ ಎಂಬ ಆತಂಕದಲ್ಲಿ ನೂಕು ನುಗ್ಗಲು ಆರಂಭಿಸಿದರು. ದಿನಸಿಗಾಗಿ ಕೆಲವರು ಟೋಕನ್ಗಳನ್ನು ಹಿಡಿದುಕೊಂಡು ಬಂದರೆ ಇನ್ನು ಕೆಲವರು ಟೋಕನ್ಗಳಿಲ್ಲದೇ ನಮಗೂ ಕೊಡಿ ಎಂದು ದುಂಬಾಲು ಬಿದ್ದರು.