ಬೆಂಗಳೂರು: ಧಾರವಾಡದ ಕುವರಿ ಸಾಫ್ಟ್‌ವೇರ್ ಕೆಲಸಕ್ಕೆ ಬೈ ಬೈ ಹೇಳಿ, ಯುಪಿಎಸ್ಸಿ ಪರೀಕ್ಷೆ ಬರೆದು ಪಾಸ್ ಆಗುವ ಮೂಲಕ ಕರ್ನಾಟಕದ ಹಿರಿಮೆ ಹೆಚ್ಚಿಸಿದ್ದಾರೆ.
ಹೌದು, ಇತ್ತೀಚೆಗೆ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ 303ನೇ ರ‍್ಯಾಂಕ್ ಪಡೆದು, ಎಲ್ಲರ ಮಚ್ಚುಗೆಗೆ ಕಾರಣರಾಗಿರೋದು ನಿವೇದಿತಾ ಎಸ್. ಬಾಲರೆಡ್ಡಿಯವರ್ .
ಬೆಂಗಳೂರಿನಲ್ಲಿ ಬಿಎಸ್ಎನ್ಎಲ್ ಕರ್ನಾಟಕ ವೃತ್ತದ ಉಪ ಪ್ರಧಾನ ವ್ಯವಸ್ಥಾಪಕ ಬಾಲರೆಡ್ಡಿಯವರ ಮಗಳಾದ ನಿವೇದಿತಾ ಮೂಲತಃ ಧಾರವಾಡದವರಾಗಿದ್ದು, ಸದ್ಯ ಬೆಂಗಳೂರಿನ ಜಯನಗರದಲ್ಲಿ ನೆಲೆಸಿದ್ದಾರೆ.
ಸಂತಸದ ಕ್ಷಣವನ್ನು ಈಟಿವಿ ಭಾರತ್ನೊಂದಿಗೆ ಹಂಚಿಕೊಂಡ ನಿವೇದಿತಾ ಎಸ್. ಬಾಲರೆಡ್ಡಿಯವರ್ ಅಂದಹಾಗೆ ನಿವೇದಿತಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಸಲ ಪ್ರಯತ್ನಿಸಿದಾಗ ಎರಡು ಮೂರು ಅಂಕದಿಂದ ಮಿಸ್ ಆಗಿತ್ತು. ಆದರೆ ಎರಡನೇ ಬಾರಿಗೆ ಸತತ ಪ್ರಯತ್ನದಿಂದ ಯುಪಿಎಸ್ಸಿ ಪಾಸ್ ಮಾಡಿ 303ನೇ ರ‍್ಯಾಂಕ್ ಪಡೆದಿದ್ದಾರೆ.
ಈ ಸಂತಸದ ಕ್ಷಣವನ್ನು ಈಟಿವಿ ಭಾರತ್ನೊಂದಿಗೆ ಹಂಚಿಕೊಂಡ ಅವರು, ಮುಂದೆ ಯುಪಿಎಸ್ಸಿ ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಕೆಲವು ಸಲಹೆ ಸಹ ನೀಡಿದ್ದಾರೆ.