ಬೆಂಗಳೂರು: ವಾಣಿಜ್ಯ ವೀಸಾದಲ್ಲಿ ಭಾರತಕ್ಕೆ ಬಂದು ಮಾದಕ ವಸ್ತು ಸರಬರಾಜು ದಂದೆಯಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಒಕೊಯ್ ಬಂಧಿತ ಆರೋಪಿ.
ಮಾದಕ ವಸ್ತು ಸರಬರಾಜು: ಸಿಸಿಬಿ ಬಲೆಗೆ ಬಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ - ಬೆಂಗಳೂರು ಡ್ರಗ್ ಕೇಸ್
ಮಾದಕ ವಸ್ತು ಸರಬರಾಜು ದಂದೆಯಲ್ಲಿ ತೊಡಗಿದ್ದ ನೈಜೀರಿಯಾ ಮೂಲದ ಒಕೊಯ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಈತ, ಮುಂಬೈ ಮೂಲದ ಪರಿಚಿತ ಆಫ್ರಿಕನ್ ವ್ಯಕ್ತಿಯಿಂದ ಮಾದಕ ಪದಾರ್ಥಗಳನ್ನು ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಅಕ್ರಮದಲ್ಲಿ ತೊಡಗಿದ್ದಾಗ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳ ಆರೋಪಿಯನ್ನು ಬಂಧಿಸಿದೆ. 8 ಲಕ್ಷ ರೂ. ಮೌಲ್ಯದ 60 ಗ್ರಾಂ ಎಂಡಿಎಂಎ, 6 ಗ್ರಾಂ ಕೊಕೇನ್, ಮೊಬೈಲ್ ಫೋನ್ ವಶಕ್ಕೆ ಪಡೆದಿದೆ. ಬಂಧಿತನ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಖಾಸಗಿ ಆಸ್ಪತ್ರೆ ಮೇಲ್ಚಾವಣಿ ಕುಸಿತ: ಅವಶೇಷದಡಿ ನಾಲ್ವರು ಕಾರ್ಮಿಕರು, ಇಬ್ಬರ ರಕ್ಷಣೆ