ಕರ್ನಾಟಕ

karnataka

ETV Bharat / state

ಉಗ್ರ ಸಂಘಟನೆ ನಂಟು : ಬೆಂಗಳೂರು ಮೂಲದ ಶಂಕಿತನ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರಿನ ಬಸವನಗುಡಿಯಲ್ಲಿ ವಾಸವಿದ್ದ ವೈದ್ಯ ಮತ್ತು ಶಂಕಿತ ಉಗ್ರ ಅಬ್ದುಲ್ ರೆಹಮಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ‌. ಕಳೆದ ವರ್ಷ ಆ.17ರಂದು ಅಬ್ದುಲ್ ರೆಹಮಾನ್ ಅನ್ನು ಬಂಧಿಸಲಾಗಿತ್ತು. ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ.

nia-submitted-charge-sheet-against-bangalore-based-suspect
ಬೆಂಗಳೂರು ಮೂಲದ ಶಂಕಿತನ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ

By

Published : Jan 12, 2021, 7:57 PM IST

ಬೆಂಗಳೂರು: ಐಸಿಸ್ ಸೇರಿದಂತೆ ಇನ್ನಿತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಆರೋಪದಡಿ ಬಂಧಿತನಾಗಿದ್ದ ಶಂಕಿತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದೆಹಲಿ ತಂಡ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಬೆಂಗಳೂರಿನ ಬಸವನಗುಡಿಯಲ್ಲಿ ವಾಸವಿದ್ದ ವೈದ್ಯ ಶಂಕಿತ ಉಗ್ರ ಅಬ್ದುಲ್ ರೆಹಮಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ‌. ಕಳೆದ ವರ್ಷ ಆಗಸ್ಟ್​ 17ರಂದು ಅಬ್ದುಲ್ ರೆಹಮಾನ್ ಅನ್ನು ಬಂಧಿಸಲಾಗಿತ್ತು. ಈತ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ.

ಬಾಂಗ್ಲಾ‌ ಮೂಲದ ನಿಷೇಧಿತ ಇಸ್ಲಾಮಿಕ್‌ ಸ್ಟೇಟ್ ಕೊರೋಸನ್ ಪ್ರಾವಿನ್ಸ್ (ISKP) ಎಂಬ ಸಂಘಟನೆಗೆ ಅಬ್ದುಲ್‌ ರೆಹಮಾನ್‌ ಸದಸ್ಯನಾಗಿದ್ದ. ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗ್ತಿದೆ. 2013ರಲ್ಲಿ ಸಿರಿಯಾದ ಐಸಿಸ್ ಉಗ್ರ ಕ್ಯಾಂಪ್​​​ಗಳಿಗೆ ಭೇಟಿ ಕೊಟ್ಟಿದ್ದರೆನ್ನಲಾದ ಅಬ್ದುಲ್​ ರೆಹಮಾನ್ ಆ ಬಳಿಕ ಐಸಿಸ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದ. ಐಸಿಸ್​​​​ಗೆ ಮೆಡಿಕಲ್ ಅಪ್ಲಿಕೇಷನ್ ಸಿದ್ಧಪಡಿಸಿಕೊಳ್ಳಲು ಮುಂದಾಗಿದ್ದ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ:ಜಾಮೀನು ನಿರೀಕ್ಷೆಯಲ್ಲಿದ್ದ ರಾಗಿಣಿ ದ್ವಿವೇದಿಗೆ ಮತ್ತೆ ನಿರಾಸೆ!

ABOUT THE AUTHOR

...view details