ಕರ್ನಾಟಕ

karnataka

ETV Bharat / state

ಸಂಭ್ರಮಾಚರಣೆ ವೇಳೆ ಸಹಕರಿಸಿದ ಜನತೆ, ಮಾಧ್ಯಮದವರಿಗೆ ಭಾಸ್ಕರ್ ರಾವ್ ಧನ್ಯವಾದ.. - New Year in Bangalore

ಹೊಸ ವರ್ಷಾಚರಣೆ ವೇಳೆ ಎಂಜಿ ರೋಡ್, ಬ್ರಿಗೇಡ್ ರೋಡ್,ಕಮರ್ಷಿಯಲ್ ಸ್ಟ್ರೀಟ್ಸ್ ಬಳಿ ಕೆಲ ಅಹಿತಕರ ಘಟನೆ ನಡೆದಿವೆ. ತೊಂದರೆಗೊಳಗಾದವರು ಈವರೆಗೆ ಯಾವುದೇ ದೂರು ನೀಡಿಲ್ಲ. ಒಂದು ವೇಳೆ ಪ್ರಕರಣ ಗಂಭೀರವಾಗಿದ್ರೆ, ಸ್ವಯುಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸ್ತೇವೆ ಎಂದು ಭಾಸ್ಕರ್ ರಾವ್ ‌ಸ್ಪಷ್ಟಪಡಿಸಿದ್ದಾರೆ.

sedfr
ಹೊಸ ವರ್ಷಾಚರಣೆ ವೇಳೆ ಸಹಕರಿಸಿದ ಜನತೆ, ಮಾಧ್ಯಮದವರಿಗೆ ಧನ್ಯವಾದ:ಭಾಸ್ಕರ್ ರಾವ್

By

Published : Jan 1, 2020, 4:29 PM IST

ಬೆಂಗಳೂರು:ಹೊಸ ವರ್ಷಾಚರಣೆಯಲ್ಲಿ ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸಿದ ಬೆಂಗಳೂರಿನ ಜನತೆ ಮತ್ತು ಮಾಧ್ಯಮದವರು ಸೇರಿ ಎಲ್ಲರಿಗೂ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ‌ಧನ್ಯವಾದಗಳನ್ನು ಹೇಳಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಸಹಕರಿಸಿದ ಜನತೆ, ಮಾಧ್ಯಮದವರಿಗೆ ಧನ್ಯವಾದ.. ಭಾಸ್ಕರ್ ರಾವ್

ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕರ್ತವ್ಯ ನಿರ್ವಹಿಸಿದ್ದೇವೆ. ಹೊಸ ವರ್ಷಾಚರಣೆ ದಿನ ಸಿಲಿಕಾನ್ ಸಿಟಿಯಲ್ಲಿ ಖಾಕಿ ಭದ್ರಕೋಟೆಯ ಒಳಗೆ ಹೊಸ ವರ್ಷಾಚರಣೆ ನಡೆಸಲಾಗಿತ್ತು. ಹೊಸ ವರ್ಷಾಚರಣೆ ಭದ್ರತೆ ಕುರಿತು ಸಿಎಂ ಹಾಗೂ ಗೃಹ ಸಚಿವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್ ರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಈ ವರ್ಷ ಹೆಚ್ಚಿನ ಜನ ಸೇರಿದ್ದರಿಂದ ನಮ್ಮ ಸಿಬ್ಬಂದಿ ತಾಳ್ಮೆಯಿಂದ ಹೊಸ ವರ್ಷಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ.ಕೆಎಸ್ಆರ್ಪಿ, ಇನ್ಸ್​ಪೆಕ್ಟರ್,ಸಬ್​ಇನ್ಸ್​ಪೆಕ್ಟರ್, ಮಹಿಳಾ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ಟ್ರಾಫಿಕ್ ಪೊಲೀಸರಿಗೂ ಇದೇ ವೇಳೆ ಭಾಸ್ಕರ್ ರಾವ್ ಅಭಿನಂದನೆ ತಿಳಿಸಿದ್ದಾರೆ.

ABOUT THE AUTHOR

...view details