ಬೆಂಗಳೂರು:ರಾಜಧಾನಿ ಬೆಂಗಳೂರಲ್ಲಿ ರಸ್ತೆ ಗುಂಡಿಗಳಿಗೆ ಮುಕ್ತಿ ಸಿಗುವ ಹಾಗೆ ಕಾಣುತ್ತಿಲ್ಲ. ಈಗ ಮಳೆಯಿಂದಾಗಿ ರಸ್ತೆಯಲ್ಲಿ ಮತ್ತೆ ಗುಂಡಿಗಳು ಬಿದ್ದಿದ್ದು, ಹೊಸದಾಗಿ 4545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಜಿಯೋ ಮ್ಯಾಪ್ ಹಾಗೂ ಫಿಕ್ಸ್‌ಮೈ ಸ್ಟ್ರೀಟ್ ಮೂಲಕ ನಡೆಸಿರುವ ಸಮೀಕ್ಷೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಬರೋಬ್ಬರಿ 4545 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿದ್ದಾರೆ.
ಬೆಂಗಳೂರಲ್ಲಿ ರಸ್ತೆ ಗುಂಡಿ ಸಮಸ್ಯೆ: ಫಿಕ್ಸ್‌ಮೈ ಸ್ಟ್ರೀಟ್ ಆ್ಯಪ್ಗೆ ಜನರು ಹೊಸದಾಗಿ ರಸ್ತೆ ಗುಂಡಿಗಳನ್ನು ಕಳುಹಿಸಿಕೊಟ್ಟಿದ್ದು, ಈ ರಸ್ತೆ ಗುಂಡಿಗಳ ಲೆಕ್ಕ ನೋಡಿ ಬಿಬಿಎಂಪಿ ಅಧಿಕಾರಿಗಳಿಗೆ ತಲೆ ಬಿಸಿಯಾಗಿದೆ.
3905 ರಸ್ತೆ ಗುಂಡಿ ಕ್ಲೋಸ್:ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆಯ ಅಧಿಕಾರಿ, ಆಗಸ್ಟ್ 20ರವರೆಗೆ 4545 ರಸ್ತೆ ಗುಂಡಿಗಳ ಪೈಕಿ ಈವರೆಗೆ ಒಟ್ಟು 3905 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಿಬಿಎಂಪಿ ಹೊರ ವಲಯದ 193 ಮತ್ತು ಮುಚ್ಚಬೇಕಿರುವ 447 ಸೇರಿದಂತೆ 640 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಉಳಿದಿವೆ ಎಂದು ತಿಳಿಸಿದ್ದಾರೆ.