ಕರ್ನಾಟಕ

karnataka

ETV Bharat / state

'ವಿಶ್ವಾಸವಿಡಿ, ಪರಿಷತ್ತಿನ ನಿಯಮಾವಳಿಯಂತೆ ಕರ್ತವ್ಯ ನಿರ್ವಹಿಸುತ್ತೇನೆ' - ಈಟಿವಿ ಭಾರತ ಕನ್ನಡ

ನನ್ನನ್ನು ಬೆಳೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ​ ಎಲ್ಲವನ್ನೂ ಹೇಳಿಕೊಟ್ಟಿದೆ. ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ನೂತನ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಹೇಳಿದರು.

deputy chairman MK Pranesh
ನೂತನ ಉಪ ಸಭಾಪತಿ ಎಂ ಕೆ ಪ್ರಾಣೇಶ್

By

Published : Dec 23, 2022, 4:53 PM IST

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನ್ನನ್ನು ಬೆಳೆಸಿದೆ. ನನಗೆ ಸಿಕ್ಕಿರುವ ಸಂಸ್ಕಾರದಂತೆಯೇ ನಾನು ನಡೆದುಕೊಳ್ಳುತ್ತೇನೆ ಮತ್ತು ಪರಿಷತ್ತಿನ ನಿಯಮಾವಳಿಯಂತೆ ಕರ್ತವ್ಯ ನಿರ್ವಹಣೆ ಮಾಡುತ್ತೇನೆ. ಇಡೀ ಸದನ ನನ್ನ ಮೇಲೆ ವಿಶ್ವಾಸ ಇಡಬೇಕು ಎಂದು ನೂತನ ಉಪ ಸಭಾಪತಿ ಎಂ ಕೆ ಪ್ರಾಣೇಶ್ ಹೇಳಿದರು.

ಪರಿಷತ್​ನಲ್ಲಿ ಉಪಸಭಾಪತಿಯಾಗಿ ಆಯ್ಕೆಯಾದ ನಂತರ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಾ, ಎಲ್ಲರೂ ಅಭಿಮಾನದ ಮಾತುಗಳನ್ನಾಡಿದ್ದಾರೆ. ಸತತವಾಗಿ 8 ಬಾರಿ ಪರಿಷತ್​ಗೆ ಆಯ್ಕೆಯಾಗಿ, ಅನುಭವದ ಆಧಾರದಲ್ಲಿ ಸದನ ನಡೆಸಲು ಬಸವರಾಜ ಹೊರಟ್ಟಿ ಅರ್ಹರಿದ್ದು ಅವರ ಕೆಳಗೆ ಕೆಲಸ ಮಾಡಲು ನನಗೆ ಹೆಮ್ಮೆಯಿದೆ ಎಂದರು.

ಪಕ್ಷ ಮತ್ತು ಸಂಘಟನೆಯಲ್ಲಿ ಬೆಳೆದವನು ನಾನು. ಹಾಗಾಗಿ ಪರಿಷತ್ತಿನ ನಿಯಮಾವಳಿಗಳ ಅಡಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ಸಂಪೂರ್ಣ ವಿಶ್ವಾಸವಿಡಿ. ಅಲ್ಲದೇ ನಿಯಮಾವಳಿ ಒಳಗೆ ಇರುವ ವ್ಯವಸ್ಥೆಯನ್ನು ಯಾರೂ ಮೀರಬಾರದು. ಮುಂದಿನ ಯುವ ಪೀಳಿಗೆಗೆ ನಾವು ಮಾರ್ಗದರ್ಶಕರಾಗಬೇಕೇ ಹೊರತು ಯುವ ಪೀಳಿಗೆಯ ಮಾರ್ಗದ ದಿಕ್ಕು ತಪ್ಪಿಸುವವರು ಆಗಬಾರದು ಎಂದು ನುಡಿದರು.

34 ವರ್ಷ ರಾಜಕಾರಣದ ಜೀವನ ನಡೆಸಿದ್ದೇನೆ. ನನ್ನನ್ನು ಬೆಳೆಸಿದ ಆರ್​ಎಸ್​ಎಸ್​ ಎಲ್ಲವನ್ನೂ ಹೇಳಿಕೊಟ್ಟಿದೆ. ಎಲ್ಲರನ್ನೂ ಸರಿಸಮನಾಗಿ ಕಾಣಬೇಕು. ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆ ನೀಡಬೇಕು ಎಂದು ಸಂಘದ ನಾಯಕರು ತಿಳಿಸಿ ನನ್ನನ್ನು ಬೆಳೆಸಿದ್ದಾರೆ. ಅದರ ಅಡಿಯಲ್ಲಿಯೇ ನಾನು ನಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ನಂತರ ಮಾತನಾಡಿದ ಜೆಡಿಎಸ್ ನಾಯಕ ಬೋಜೇಗೌಡ, ಸಭಾಪತಿ ಅವರಂತೆ ಉಪ ಸಭಾಪತಿಯು ಅವಿರೋಧ ಆಯ್ಕೆಯಾಗಬೇಕು ಎನ್ನುವುದೇ ನಮ್ಮ ಅಪೇಕ್ಷೆ ಆಗಿತ್ತು. ಆದರೆ ಈಗ ಹಾಗಾಗಲಿಲ್ಲ. ಆದರೆ ಇನ್ನು ಮುಂದೆಯಾದರೂ ಅವಿರೋಧ ಆಯ್ಕೆ ಆಗಲಿ ಎಂದು ಅಪೇಕ್ಷೆ ವ್ಯಕ್ತಪಡಿಸುತ್ತೇವೆ. ಆದರೆ ಚುನಾವಣೆ ಆರಂಭಕ್ಕೂ ಮುನ್ನ ಸಭಾಪತಿ ಬಗ್ಗೆ ನಾನು ನೀಡಿದ್ದ ಹೇಳಿಕೆಗೆ ಯಾರೂ ಅನ್ಯತಾ ಭಾವಿಸಬಾರದು. ನನ್ನದು ಆರೋಪ ಮಾಡುವ ಹೇಳಿಕೆ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ನೂತನ ಉಪ ಸಭಾಪತಿಯಾಗಿ ಎಂ ಕೆ ಪ್ರಾಣೇಶ್ ಆಯ್ಕೆ

ABOUT THE AUTHOR

...view details