ಬೆಂಗಳೂರು: ಪೌರತ್ವ ಕಾಯ್ದೆ ಜಾರಿಗೆ ತರುವ ಕುರಿತು ಮಾಜಿ ಪ್ರಧಾನಿಗಳಾದ ನೆಹರು ಹಾಗೂ ಮನಮೋಹನ್ ಸಿಂಗ್ ಅವರುಗಳು ಚಿಂತನೆ ನಡೆಸಿದ್ದರು. ಆದರೆ,ಇದೀಗ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದ್ದಾರೆ.
ನೆಹರು,ಮಮೋ ಪೌರತ್ವ ಕಾಯ್ದೆ ಜಾರಿಗೆ ತರಲು ಚಿಂತಿಸಿದ್ದರು.. ಸಾಹಿತಿ ಕಂಬಾರ - ಪೌರತ್ವ ಕಾಯಿದೆ ಬಗ್ಗೆ ಮನೆ ಮನೆಗೆ ತೆರಳಿ ಅಭಿಯಾನ
ವಿವಾದ ಮತ್ತು ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ತೆರೆ ಎಳೆಯಲು ಬಿಜೆಪಿಯಿಂದ ಜಾಗೃತಿ ಅಭಿಯಾನ ನಡೆಯುತ್ತಿದೆ.
ನೆಹರು,ಮನಮೋಹನ್ ಸಿಂಗ್ ಪೌರತ್ವ ಕಾಯ್ದೆ ಜಾರಿಗೆ ತರಲು ಯೋಚಿಸಿದ್ದರು:ಸಾಹಿತಿ ಚಂದ್ರಶೇಖರ ಕಂಬಾರ
ನಗರದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ಮನೆ ಮನೆ ಅಭಿಯಾನದ ವೇಳೆ ಡಾ. ಕಂಬಾರರ ಮನೆಗೆ ಭೇಟಿ ನೀಡಿದರು. ಪೌರತ್ವ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಂಬಾರರು, ಈ ಕಾಯ್ದೆಯನ್ನು ಯಾರೂ ವಿರೋಧಿಸಬಾರದು ಎಂದು ಮನವಿ ಮಾಡಿದರು.