ಆನೇಕಲ್: ಗಾಯಗೊಂಡ ಮಗುವಿಗೆ ಚಿಕಿತ್ಸೆ ನೀಡುವ ಬದಲು ಕೊರೊನಾ ಮೀಟಿಂಗ್ ಎಂದು ಗಂಟೆಗಟ್ಟಲೆ ಕಾಯಿಸಿದ ವೈದ್ಯರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಪೋಷಕರು ಗಲಾಟೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಗುವಿನ ಚಿಕಿತ್ಸೆಗೆ ಬಾರದ ವೈದ್ಯರು: ಪೋಷಕರು ಗರಂ - Baby treatment
ಮಗುವಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಕ್ರೋಶಗೊಂಡ ಪೋಷಕರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ಪೋಷಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿರುವ ದೃಶ್ಯ ಸೆರೆ
ಜಿಗಣಿಯ ಆಸ್ಪತ್ರೆ ಮೇಲೆ ಸಾಕಷ್ಟು ದೂರುಗಳಿವೆ ಎನ್ನಲಾಗಿದೆ. ಇದೀಗ ಮಗುವಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ತೋರಿದ್ದು, ಪೋಷಕರು ರೊಚ್ಚಿಗೆದ್ದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ನಾಲಿಗೆಯ ಚಿಕಿತ್ಸೆಗೆಂದು ಮಗುವನ್ನು ಕರೆ ತರಲಾಗಿತ್ತು. ಆದರೆ ವೈದ್ಯರು ಮೀಟಿಂಗ್ ಎಂದು ಚಿಕಿತ್ಸೆ ನೀಡುವುದನ್ನು ವಿಳಂಬ ಮಾಡಿದ್ದಾರೆ. ಇದರಿಂದ ಕೋಪಗೊಂಡ ಕುಟುಂಬಸ್ಥರು ನಾಲ್ವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅಲ್ಲಿದ್ದ ವಸ್ತುಗಳನ್ನು ಹಾನಿ ಮಾಡಿದ್ದಾರೆ ಎನ್ನಲಾಗಿದೆ.