ಕರ್ನಾಟಕ

karnataka

By

Published : May 22, 2019, 8:47 PM IST

ETV Bharat / state

ನಾಯ್ಡು,ಗೌಡರ ಭೇಟಿ ಜನತೆಯಲ್ಲಿ ಗೊಂದಲ ಮೂಡಿಸುವ ಯತ್ನ:ಯಡಿಯೂರಪ್ಪ

ಸೋಲಿನ ಭಯದಿಂದ ಕಾಂಗ್ರೆಸ್ ಮತ್ತು‌ ಇತರೆ ವಿಪಕ್ಷಗಳು ಇವಿಎಂ ಬಗ್ಗೆ ಆರೋಪ ಮಾಡುತ್ತಿವೆ. ಇತ್ತೀಚೆಗಿನ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಚುನಾವಣೆಗಳಲ್ಲಿ ಯಾಕೆ ಇವಿಎಂ ಬಗ್ಗೆ ಆರೋಪ ಮಾಡಲಿಲ್ಲ? ಒಂದು ವೇಳೆ ಇವಿಎಂಗಳಲ್ಲಿ ತೊಂದರೆ ಇದ್ದರೆ ಕಾಂಗ್ರೆಸ್​ನವರು ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿಯೂ ನಿಶ್ಚಿತವಾಗಿ 22 ಸ್ಥಾನ ಗೆಲ್ಲುತ್ತೇವೆ:ಯಡಿಯೂರಪ್ಪ

ಬೆಂಗಳೂರು: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರನ್ನು ಭೇಟಿ ಮಾಡಿದ್ದು ಗೊಂದಲ ಮೂಡಿಸುವ ಪ್ರಯತ್ನ ಮಾತ್ರ. ದೇಶದಲ್ಲಿ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು ರಾಜ್ಯದಲ್ಲಿಯೂ ನಿಶ್ಚಿತವಾಗಿ 22 ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿಯೂ ನಿಶ್ಚಿತವಾಗಿ 22 ಸ್ಥಾನ ಗೆಲ್ಲುತ್ತೇವೆ:ಯಡಿಯೂರಪ್ಪ

ವೈದ್ಯಕೀಯ ತಪಾಸಣೆಗೊಳಗಾಗಿ ಒಂದು ದಿನದ ವಿಶ್ರಾಂತಿ ಪಡೆದು ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹಿಂದಿರುಗಿದರು. ಈ ವೇಳೆ ಮಾತನಾಡಿದ ಅವರು, ಸೋಲಿನ ಭಯದಿಂದ ಕಾಂಗ್ರೆಸ್ ಮತ್ತು‌ ಇತರೆ ವಿಪಕ್ಷಗಳು ಇವಿಎಂ ಬಗ್ಗೆ ಆರೋಪ ಮಾಡುತ್ತಿವೆ. ಇತ್ತೀಚೆಗಿನ ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸ್​ಗಢ ಚುನಾವಣೆಗಳಲ್ಲಿ ಯಾಕೆ ಇವಿಎಂ ಬಗ್ಗೆ ಆರೋಪ ಮಾಡಲಿಲ್ಲ? ಒಂದು ವೇಳೆ ಇವಿಎಂಗಳಲ್ಲಿ ತೊಂದರೆ ಇದ್ದರೆ ಕಾಂಗ್ರೆಸ್​ನವರು ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆಯೋಗ ಹತ್ತಾರು ಬಾರಿ ಪರಿಶೀಲಿಸಿ ದೋಷ ಇಲ್ಲ ಅಂದಿದೆ‌ ಫಲಿತಾಂಶ ಬರೋವರೆಗೂ ಶಾಂತವಾಗಿ ಕಾಯದೇ ಆರೋಪ ಮಾಡುವುದು ಸರಿಯಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದರು.

ಚಂದ್ರಬಾಬು ನಾಯ್ಡು ದೇವೇಗೌಡರ ಭೇಟಿ ಕೂಡ ಸುಮ್ಮನೆ ಗೊಂದಲ ಮೂಡಿಸುವ ಪ್ರಯತ್ನ ಮಾತ್ರ. ವಿಪಕ್ಷಗಳಿಂದ ದೇಶದ ಜನತೆಯಲ್ಲಿ ಗೊಂದಲ ಉಂಟಾಗ್ತಿದೆ. ದೇಶದ ಜನತೆ ವಿಚಲಿತರಾಗುವ ಅಗತ್ಯ ಇಲ್ಲ, ನಾಳೆ ಬಿಜೆಪಿ ರಾಷ್ಟ್ರಮಟ್ಟದಲ್ಲಿ 300ಕ್ಕೂ ಹೆಚ್ಚು ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 22ಸ್ಥಾನ ಹಾಗೂ ಕುಂದಗೋಳ ಚಿಂಚೋಳಿ ಉಪಚುನಾವಣೆಯಲ್ಲೂ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕ ರೋಷನ್ ಬೇಗ್ ಅವರ ಹೇಳಿಕೆ ವೈಯಕ್ತಿಕವಾದುದು.ಅದು ಅವರ ಪಕ್ಷಕ್ಕೆ ಸಂಬಂಧಿಸಿದ್ದು ಈ ಬಗ್ಗೆ ನಾವು ಪ್ರತಿಕ್ರಿಯಿಸಲ್ಲ ಎಂದರು.

For All Latest Updates

TAGGED:

ABOUT THE AUTHOR

...view details