ಬೆಂಗಳೂರು :ಎನ್ಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡಸಿ ಎರಡು ಪ್ರತ್ಯೇಕ ಡ್ರಗ್ಸ್ ಪ್ರಕರಣಗಳನ್ನು ಬೇಧಿಸಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಜನ ಅಂತಾರಾಜ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ.
ಲೆಹಂಗಾದಲ್ಲಿ ಡ್ರಗ್ಸ್ ಇಟ್ಟು ಸಾಗಿಸುತ್ತಿದ್ದ ಭೂಪ :ಡ್ರಗ್ ಮರೆಮಾಚಲು ಲೆಹೆಂಗಾದ ಫಾಲ್ಸ್ ಲೈನ್ ಭಾಗದಲ್ಲಿ ಸ್ಟಿಚ್ ಮಾಡಿ ಒಳಗಡೆ ಡ್ರಗ್ಸ್ ಇಡಲಾಗಿತ್ತು. ನಕಲಿ ವಿಳಾಸದ ದಾಖಲಾತಿ ನೀಡಿ, ಡ್ರಗ್ಸ್ ಅನ್ನು ಹೈದರಾಬಾದಿನಿಂದ ಆಸ್ಟ್ರೇಲಿಯಾಗೆ ರವಾನಿಸಲಾಗುತ್ತಿತ್ತು.
ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಲಕ್ಷಾಂತರ ರೂ. ಮೌಲ್ಯದ 3 ಕೆಜಿ ಸಿಡೊಫಿಡ್ರೈನ್ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಮಾದಕ ವಸ್ತು ನಿಗ್ರಹ ದಳದ ವಲಯ ಅಧಿಕಾರಿಯಾದ ಅಮಿತ್ ಘವಾಟೆ ತಿಳಿಸಿದ್ದಾರೆ.
ದೇವನಹಳ್ಳಿ ಟೋಲ್ ಬಳಿ ಬಂಧಿಯಾದ ಆರೋಪಿ ಕಾರಿನಲ್ಲಿ ಮಾದಕ ವಸ್ತಗಳ ಸಾಗಾಟ :ದೇವನಹಳ್ಳಿ ಟೋಲ್ ಬಳಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಶಿಫ್ಟ್ ಕಾರಿನಲ್ಲಿ ಮಾದಕ ವಸ್ತು ಸಾಗಣೆಯಾಗುತ್ತಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಮುಖ ಆರೋಪಿ ವಿಶಾಖಪಟ್ಟಣ ಮೂಲದನಾಗಿದ್ದಾನೆ. ಉಳಿದ ಮೂವರು ಆಂಧ್ರ ಮತ್ತು ಬಿಹಾರ ಮೂಲದವರಾಗಿದ್ದಾರೆ ಎನ್ನಲಾಗುತ್ತಿದೆ.
ಈ ಆರೋಪಿಗಳು ಬೆಂಗಳೂರಿನಿಂದ ಹೈದರಾಬಾದಿಗೆ ಮಾಲು ಸಮೇತ ಕಾರಿನಲ್ಲಿ ತೆರಳುತ್ತಿದ್ದರು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಎಂಡಿಎಂ ಪಿಲ್ಸ್, ಮಿಥಾಫಿಟಮೈನ್ ಮತ್ತು ಮಿಥಾಕೋಲೋನ್ ಜಪ್ತಿ ಮಾಡಲಾಗಿದೆ.
ಪ್ರಕರಣ ಸಂಬಂಧ ವಿಶಾಖಪಟ್ಟಣ ಮೂಲದ ಡ್ರಗ್ಸ್ ಸಪ್ಲೈಯರ್ ಮನೆಯಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ ಗಾಂಜಾ ಪತ್ತೆಯಾಗಿದೆ. ಈತ ಬೆಂಗಳೂರು ಮೂಲದ ವ್ಯಕ್ತಿಯಿಂದ ವಿವಿಧ ಬಗೆಯ ಡ್ರಗ್ಸ್ ತರಿಸಿಕೊಂಡು ಹೈದರಾಬಾದ್ ಪಬ್ ಹಾಗೂ ಪಾರ್ಟಿಗಳಲ್ಲಿ ಮಾರಾಟ ಮಾಡುತ್ತಿದ್ದ. ಸದ್ಯ ಎನ್ಸಿಬಿ ಪೊಲೀಸ್ ಸಿಬ್ಬಂದಿ ತನಿಖೆ ಮುಂದುವರೆಸಿದ್ದಾರೆ ಎಂದು ವಲಯ ನಿರ್ದೇಶಕ ಅಮಿತ್ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನು ಮಾರಿ ಯಾರೊಂದಿಗೋ ಓಡಿ ಹೋದಳೆಂದು ಕಥೆ ಕಟ್ಟಿದ ಪತಿ ಅರೆಸ್ಟ್