ಬೆಂಗಳೂರು:ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಸ್ವಾಗತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಸುಪ್ರೀಂ ತೀರ್ಪು ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ: ಅನರ್ಹರಿಗೆ ಟಿಕೆಟ್ ವಿಚಾರ ಕುರಿತು ನಳೀನ್ ಹೇಳಿದ್ದೇನು? - ಅನರ್ಹ ಶಾಸಕರ ತೀರ್ಪು
ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ 17 ಶಾಸಕರ ಅನರ್ಹತೆಯ ವಿವಾದ ನ್ಯಾಯಾಲಯದ ಮುಂದೆ ಇತ್ತು. ಮಾಜಿ ಸಭಾಧ್ಯಕ್ಷರ ತೀರ್ಮಾನವನ್ನ ನ್ಯಾಯಾಲಯ ಎತ್ತಿಹಿಡಿದಿದೆ. ಜೊತೆಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆಗೂ ಅವಕಾಶ ಕೊಟ್ಟಿದೆ. ನ್ಯಾಯಾಲಯದ ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದರು.
ಉಪ ಚುನಾವಣೆ ಘೊಷಣೆ ಈಗಾಗಲೇ ಆಗಿದೆ. ಅದರ ಬಗ್ಗೆ ಪ್ರಮುಖರು ಕುಳಿತು ಚರ್ಚೆ ಮಾಡ್ತೀವಿ. ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಇಂದು ಚರ್ಚೆ ಮಾಡುತ್ತೇವೆ. ಇಂದು ಸಂಜೆ ಕೋರ್ ಕಮಿಟಿ ಸಭೆ ಇದೆ. ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಮುಂದೆ ಅವರಿಗೆ ಸ್ಥಾನ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ, ರಾಜು ಕಾಗೆ, ಶರತ್ ಬಚ್ಚೇಗೌಡ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುವ ವಿಚಾರ, ಯಾರನ್ನು ಕಳಿಸಿ ಮನವೊಲಿಸಬೇಕು ಎನ್ನುವುದೂ ಕೋರ್ ಕಮಿಟಿಯಲ್ಲಿ ಚರ್ಚೆಯಾಗುತ್ತದೆ. ಸಂಜೆ ಎಲ್ಲವೂ ಚರ್ಚೆಯಾಗಿ ನಿರ್ಧಾರ ಆಗುತ್ತದೆ ಎಂದರು.