ಬೆಂಗಳೂರು: ನಗರದಲ್ಲಿ ಇಂದು ಸ್ಫೋಟದ ಸದ್ದಿನೊಂದಿಗೆ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 11-50ರಿಂದ 12-15ರ ಸಮಯದಲ್ಲಿ ಶಬ್ದವು ಕೇಳಿಬಂದಿದ್ದು, ಜನರು ಭಯಭೀತರಾಗಿದ್ದರು.
ಭಾರಿ ಶಬ್ದದಿಂದ ನಗರದ ಹೆಮ್ಮಿಗೆಪುರ, ಕೆಂಗೇರಿ, ಜ್ಞಾನಭಾರತಿ, ಆರ್.ಆರ್. ನಗರ, ಕಗ್ಗಲಿಪುರದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿತ್ತು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಥಳೀಯವಾಗಿ ಭೂಕಂಪನದ ಯಾವುದೇ ಮಾಹಿತಿ ದಾಖಲಾಗಿಲ್ಲ. ಭೂಕಂಪ ಮಾಪನ ಸಿಸ್ಮೋಗ್ರಾಫ್ನಲ್ಲಿ ಭೂಕಂಪನವಾದ ಮಾಹಿತಿ ಇಲ್ಲದಿರುವುದರಿಂದ ಭೂಕಂಪನ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಜನರೇ ಎಚ್ಚರ: ಮತ್ತೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆ!