ಕರ್ನಾಟಕ

karnataka

ETV Bharat / state

ಬಾಡಿಗೆದಾರನೇ ವೃದ್ಧ ದಂಪತಿಯ ಹಂತಕ: ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ ಪಡೆ - ಬೆಂಗಳೂರು ಕ್ರೈಂ ನ್ಯೂಸ್

ದಂಪತಿ ಕೊಲೆ ಮಾಡಲು ಪೂರ್ವ ಸಿದ್ಧತೆಯೊಂದಿಗೆ ಹಿಂದೂಪುರದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಮೆಜೆಸ್ಟಿಕ್​ನಿಂದ ಕುಮಾರಸ್ವಾಮಿ ಲೇಔಟ್​​ಗೆ ಬಿಎಂಟಿಸಿಯಲ್ಲಿ ಬಸ್​​ನಲ್ಲಿ ಬಂದಿದ್ದಾರೆ. ಸಮೀಪದ ಅಂಗಡಿಯೊಂದರಲ್ಲಿ ಸ್ಕ್ರೂಡ್ರೈವರ್ ಖರೀದಿಸಿದ್ದರು..

Murder of an elderly couple
ವೃದ್ಧ ದಂಪತಿ ಹತ್ಯೆ

By

Published : Aug 24, 2021, 3:31 PM IST

Updated : Aug 24, 2021, 4:06 PM IST

ಬೆಂಗಳೂರು :ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ ಕೊಲೆ ಪ್ರಕರಣವನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬೇಧಿಸಿದ್ದಾರೆ. ಬಾಡಿಗೆದಾರನೇ ಸಹಚರರೊಂದಿಗೆ ಸೇರಿ ದಂಪತಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದ.

ಈ ಹಿನ್ನೆಲೆ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ನಾರಾಯಣಪ್ಪ, ರಾಮಸ್ವಾಮಿ, ಆಸೀಫ್ ಹಾಗೂ ಗಂಗಾಧರ್ ಎಂಬ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಸಾಲ ತೀರಿಸಲು ಕೊಲೆ!!

ನಾರಾಯಣಪ್ಪ ಕಳೆದ 10 ವರ್ಷಗಳ ಹಿಂದೆ ಶಾಂತರಾಜು-ಪ್ರೇಮಲತಾ ಎಂಬುವರ ಮನೆಯಲ್ಲಿ ಬಾಡಿಗೆದಾರನಾಗಿದ್ದ. ಕೆಲ ವರ್ಷಗಳ ಹಿಂದೆ ಮನೆ ಖಾಲಿ ಮಾಡಿ ಹಿಂದೂಪುರದಲ್ಲಿ ನೆಲೆಸಿದ್ದ. ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿದ್ದ.

ಸಾಲ ತೀರಿಸಲಾಗದೆ ಒದ್ದಾಡುತ್ತಿದ್ದ. ಈ ಸಂಬಂಧ ಆಗಸ್ಟ್ 12ರಂದು ದಂಪತಿ ಮನೆಗೆ ನಾರಾಯಣಪ್ಪ ಬಂದಿದ್ದ. ಸಾಲ ತೀರಿಸಲು ಹಣದ ಸಹಾಯ ಮಾಡುವಂತೆ ಮನವಿ ಮಾಡಿದ್ದ. ಈ ವೇಳೆ ದಂಪತಿ ನಿರಾಕರಿಸಿದ್ದರು.

ಇದನ್ನೂ ಓದಿ: ಮೈಸೂರು ಚಿನ್ನದಂಗಡಿಯಲ್ಲಿ ದರೋಡೆ: ಡಿಸಿಪಿ ಗೀತಾ ಪ್ರಸನ್ನ ನೇತೃತ್ವದಲ್ಲಿ 4 ತಂಡ ರಚನೆ

ಆಗಸ್ಟ್​ 20ರಂದು ವರಮಹಾಲಕ್ಷ್ಮಿ ಹಬ್ಬದ ದಿನದಂದು ನಾಲ್ವರು ಆರೋಪಿಗಳು ಮ‌ನೆಗೆ ಬಂದಿದ್ದಾರೆ. ಸಂಬಂಧಿಕರಿಗೆ ಅನಾರೋಗ್ಯ ಹಿನ್ನೆಲೆ ಸಾಲ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರೇಮಲತಾ ನಿರಾಕರಿಸಿದ್ದರಿಂದ, ಆರೋಪಿಗಳು ಕುಪಿತಗೊಂಡು, ವೈರ್​ನಿಂದ ವೃದ್ಧೆಯ ಕತ್ತು ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ ಎನ್ನಲಾಗಿದೆ. ಮಲಗಿದ್ದ ಶಾಂತರಾಜುರನ್ನು ಸ್ಕ್ರೂಡ್ರೈವರ್​ನಿಂದ ಚುಚ್ಚಿ, ತಲೆದಿಂಬಿನಿಂದ ಮುಖವನ್ನೊತ್ತಿ ಉಸಿರುಗಟ್ಟಿಸಿ ಸಾಯಿಸಿದ್ದರು ಎಂದು ತಿಳಿದು ಬಂದಿದೆ.

ಬಿಎಂಟಿಸಿ ಬಸ್​ನಲ್ಲಿ ಬಂದು ದುಷ್ಕೃತ್ಯ

ದಂಪತಿ ಕೊಲೆ ಮಾಡಲು ಪೂರ್ವ ಸಿದ್ಧತೆಯೊಂದಿಗೆ ಹಿಂದೂಪುರದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಗಳು ಮೆಜೆಸ್ಟಿಕ್​ನಿಂದ ಕುಮಾರಸ್ವಾಮಿ ಲೇಔಟ್​​ಗೆ ಬಿಎಂಟಿಸಿಯಲ್ಲಿ ಬಸ್​​ನಲ್ಲಿ ಬಂದಿದ್ದಾರೆ. ಸಮೀಪದ ಅಂಗಡಿಯೊಂದರಲ್ಲಿ ಸ್ಕ್ರೂಡ್ರೈವರ್ ಖರೀದಿಸಿದ್ದರು.

ಬಳಿಕ ಮನೆಗೆ ಹೋಗಿ ಅಂದುಕೊಂಡಂತೆ ಕೃತ್ಯವೆಸಗಿ ಮತ್ತೆ ಬಸ್ ಮೂಲಕ ಮೆಜೆಸ್ಟಿಕ್​ಗೆ ಹೋಗಿ ಅಲ್ಲಿಂದ ಹಿಂದೂಪುರ ಸೇರಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನೂರಾರು ಸಿಸಿ ಟಿವಿಗಳ ದೃಶ್ಯ ಪರಿಶೀಲಿಸಿ ಆರೋಪಿಗಳ ಚಲನವಲನ ಪತ್ತೆ ಮಾಡಿ, ಬಳಿಕ ಬಂಧಿಸಿದ್ದಾರೆ.

Last Updated : Aug 24, 2021, 4:06 PM IST

ABOUT THE AUTHOR

...view details