ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ಸದ್ಯ ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆ ಅತಿ ದೊಡ್ಡ ಚರ್ಚೆಯ ವಿಷಯವಾಗಿದೆ. ಮುನಿರತ್ನ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಮರು ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿಯಿಂದ ಅಭ್ಯರ್ಥಿಯಾಗಿರುವ ಮುನಿರತ್ನಗೆ ತಮ್ಮ ಮಾತೃಪಕ್ಷ ಕಾಂಗ್ರೆಸ್ಸೇ ಮಗ್ಗುಲ ಮುಳ್ಳಾಗಿದೆ.
ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲಿ ಮುನಿರತ್ನಗೆ ಮಾತೃಪಕ್ಷ ಕಾಂಗ್ರೆಸ್ಸೇ ಮಗ್ಗುಲ ಮುಳ್ಳು
ಕ್ಷೇತ್ರದಲ್ಲಿ 1 ಲಕ್ಷ 20 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮತದಾರರಿದ್ದಾರೆ. ಚುನಾವಣೆಯಲ್ಲಿ ಇವರೇ ನಿರ್ಣಾಯಕರು ಆಗಿ ಪರಿಣಮಿಸಿದ್ದರೂ, ಇವರ ಸಹಕಾರ ಸಿಕ್ಕವರ ಗೆಲುವು ಸುಲಭ..!
ಸಂಗ್ರಹ ಚಿತ್ರ
ಬಿಬಿಎಂಪಿ ಸದಸ್ಯರಾಗಿ ಹಾಗೂ ಎರಡು ಅವಧಿಗೆ ಶಾಸಕರಾಗಿ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ ಇವರಿಗೆ ಇದೀಗ ಬಿಜೆಪಿಯಿಂದ ಹ್ಯಾಟ್ರಿಕ್ ಗೆಲುವು ಸಿಗುವುದೆ ಅನ್ನುವುದೇ ದೊಡ್ಡ ಕುತೂಹಲದ ಪ್ರಶ್ನೆ.
ಒಟ್ಟು 4.8 ಮತದಾರರನ್ನು ಒಳಗೊಂಡಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ 20 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮತದಾರರಿದ್ದಾರೆ. ಚುನಾವಣೆಯಲ್ಲಿ ಇವರೇ ನಿರ್ಣಾಯಕರು ಆಗಿ ಪರಿಣಮಿಸಿದ್ದರೂ, ಇವರ ಸಹಕಾರ ಸಿಕ್ಕವರ ಗೆಲುವು ಸುಲಭವಾಗುವುದರಲ್ಲಿ ಸಂಶಯವಿಲ್ಲ.
Last Updated : Oct 24, 2020, 11:42 PM IST