ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಮುನಿರತ್ನ ಹಾಗೂ ಶಿರಾ ಕ್ಷೇತ್ರದ ನೂತನ ಶಾಸಕ ರಾಜೇಶ್ ಗೌಡ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಆಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.
ಆದಿಚುಂಚನಗಿರಿ ಶಾಖಾ ಮಠಕ್ಕೆ ಮುನಿರತ್ನ,ರಾಜೇಶ್ ಗೌಡ ಭೇಟಿ : ಆಶೀರ್ವಾದ ಪಡೆದ ನೂತನ ಶಾಸಕರು - Munirathna and Rajesh Gowda
ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಆದಿಚುಂಚನಗಿರಿ ಶಾಖಾ ಮಠಕ್ಕೆ ಮುನಿರತ್ನ,ರಾಜೇಶ್ ಗೌಡ ಭೇಟಿ
ನಿನ್ನೆ ಸಂಜೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ಭೇಟಿ ನೀಡಿದರು.ಚುನಾವಣೆಗೂ ಮುನ್ನ ಭೇಟಿ ನೀಡಿದ್ದ ಮುನಿರತ್ನ ಫಲಿತಾಂಶದ ನಂತರ ಮತ್ತೆ ಮಠಕ್ಕೆ ಭೇಟಿ ನೀಡಿದರು.ಮತ್ತೋರ್ವ ಗೆದ್ದ ಅಭ್ಯರ್ಥಿ ರಾಜೇಶ್ ಗೌಡ ಕೂಡ ಶ್ರೀಗಳ ಭೇಟಿ ಮಾಡಿದರು.
ಗೆದ್ದ ಅಭ್ಯರ್ಥಿಗಳಿಗೆ ನಿರತಮಲಾನಂದ ಶ್ರೀಗಳು ಶಾಲು ಹೊದಿಸಿ ಮಂತ್ರ ಘೋಷಗಳಿಂದ ಆಶೀರ್ವಾದ ಮಾಡಿದರು. ಸಚಿವರಾದ ಆರ್ ಅಶೋಕ್, ಗೋಪಾಲಯ್ಯ ಹಾಗು ಪಾಲಿಕೆ ಮಾಜಿ ಸದಸ್ಯ ರಾಮಚಂದ್ರ ಸಾಥ್ ನೀಡಿದರು.