ಕರ್ನಾಟಕ

karnataka

By

Published : Jan 11, 2021, 8:54 PM IST

ETV Bharat / state

ಲಸಿಕಾ ದಾಸ್ತಾನು ಕೇಂದ್ರ ಪರಿಶೀಲಿಸಿದ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ

ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ, ದಾಸಪ್ಪ ಆಸ್ಪತ್ರೆಯಲ್ಲಿನ ಲಸಿಕಾ ದಾಸ್ತಾನು ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ, ತಯಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.

Municipality administrator Gaurav Gupta inspected the vaccine center
ಲಸಿಕಾ ದಾಸ್ತಾನು ಕೇಂದ್ರ ಪರಿಶೀಲಿಸಿದ ಪಾಲಿಕೆ ಆಡಳಿತಗಾರ ಗೌರವ್ ಗುಪ್ತಾ

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 1,71,000 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ದತಾ ಕಾರ್ಯಗಳು ನಡೆಯುತ್ತಿವೆ.

ಲಸಿಕೆಯನ್ನು ಯಾವ ರೀತಿ ಸಂಗ್ರಹಿಸಿಡಲಾಗಿದೆ, ಲಸಿಕೆಯನ್ನು ಕೇಂದ್ರಗಳಿಗೆ ಕೊಂಡೊಯ್ಯುವ ಬಗೆ, ಯಾವ ವಿಧಾನದಲ್ಲಿ ಲಸಿಕೆ ನೀಡಲಾಗುತ್ತದೆ ಎಂಬುದರ ಕುರಿತು ಗೌರವ್‌ ಗುಪ್ತಾ ಮಾಹಿತಿ ಪಡೆದುಕೊಂಡರು.

ಉಗ್ರಾಣ ವ್ಯವಸ್ಥಾಪಕ ಪ್ರತಿಕ್ರಿಯಿಸಿ, ದಾಸಪ್ಪ ಆಸ್ಪತ್ರೆಯಲ್ಲಿ 9 ಐಸ್‌ಲೈನ್ ರೆಫ್ರಿಜರೇಟರ್‌ಗಳಿವೆ. ಪ್ರತಿ ಐಸ್‌ಲೈನ್ ರೆಫ್ರಿಜರೇಟರ್ ನಲ್ಲಿ 45 ಸಾವಿರ ಲಸಿಕಾ ಡೋಸ್‌ಗಳನ್ನು ಇಡಬಹುದಾಗಿದೆ. ಅದೇ ರೀತಿ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೋಲ್ಡ್ ಚೈನ್ ಪಾಯಿಂಟ್ ಗಳಲ್ಲಿಯೂ ಐಸ್‌ಲೈನ್ ರೆಫ್ರಿಜರೇಟರ್ ಗಳಿದ್ದು, ಅಲ್ಲಿಯೂ ಲಸಿಕೆಗಳನ್ನು ಸಂಗ್ರಹಿಸಬಹುದಾಗಿದೆ. ಲಸಿಕೆ ಮುಖ್ಯ ಉಗ್ರಾಣ ಕೇಂದ್ರಕ್ಕೆ ತಲುಪಿದ ದಿನದಿಂದ ಎಲ್ಲಾ 141 ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಲಸಿಕೆಗಳನ್ನು ಕೋಲ್ಡ್ ಬಾಕ್ಸ್​ನಲ್ಲಿರಿಸಿ ವಾಹನಗಳ ಮೂಲಕ ಸಾಗಾಣೆ ಮಾಡಲಾಗುತ್ತದೆ ಎಂದರು.

ಪ್ರತಿಯೊಂದು ಲಸಿಕಾ ಸ್ಥಳಗಳನ್ನು ಕೋಲ್ಡ್ ಚೈನ್ ಪಾಯಿಂಟ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದ ನೀಲ ನಕ್ಷೆಯನ್ನು ಸಿದ್ದಪಡಿಸಲಾಗಿದೆ. ಲಸಿಕೆ ನೀಡುವ ದಿನದಂದು ಕೋಲ್ಡ್ ಚೈನ್ ಪಾಯಿಂಟ್ ನಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಲಸಿಕೆ ತಲುಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details