ಬೆಂಗಳೂರು:ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗುತ್ತಿದೆ. ಒಂದೆಡೆ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ನಗರದಲ್ಲಿ ಎರಡೂವರೆ ಲಕ್ಷ ಇದ್ದ ಸಕ್ರಿಯ ಪ್ರಕರಣಗಳೀಗ 98,125ಕ್ಕೆ ಇಳಿದಿವೆ.
ಇನ್ನು ಕಳೆದ 10 ದಿನಗಳಲ್ಲಿ ನಗರದಲ್ಲಿ 92,740 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 10 ದಿನಗಳಲ್ಲಿ 30,303 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ಮುಂದಿನ 15 ದಿನಗಳ ಕಾಲ ಇದೇ ಸರಾಸರಿಯಲ್ಲಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆದ್ರೆ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ ಮೂರಂಕಿ ತಲುಪುವ ಸಾಧ್ಯತೆ ಇದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆಯಾಗಿ ಡಿಸ್ಚಾರ್ಜ್ ಸಂಖ್ಯೆ ಜಾಸ್ತಿಯಾದ್ರೆ ಬಹುಬೇಗ ಆ್ಯಕ್ಟಿವ್ ಪ್ರಕರಣಗಳ ಸಂಖ್ಯೆ ತಗ್ಗಲಿದೆ.
ಕಳೆದ 10 ದಿನಗಳಲ್ಲಿ ಬೆಂಗಳೂರಿನಲ್ಲಿ ಹೊಸ ಪ್ರಕರಣ ಮತ್ತು ಡಿಸ್ಚಾರ್ಜ್ ಆದವರು:
ಮೇ 31 - 3991 - 20,332.
ಜೂನ್ 1 - 3418 - 5,483.
ಜೂನ್ 2 - 4095 - 8,620.
ಜೂನ್ 3 - 3533 - 7,672.