ಕರ್ನಾಟಕ

karnataka

ETV Bharat / state

ವಿರೋಧ ಪಕ್ಷದಿಂದ ಅತೃಪ್ತ ಶಾಸಕರಿಗೆ ಮಂಗನ ಟೋಪಿ: ಸಚಿವ ಡಿಕೆಶಿ ವ್ಯಂಗ್ಯ

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ಸುಪ್ರೀಂಕೋರ್ಟ್​ ನೀಡಿದ ತೀರ್ಪನ್ನು ಸಚಿವ ಡಿಕೆ ಶಿವಕುಮಾರ್ ಸ್ವಾಗತಿಸಿದ್ದು, ಸ್ಪೀಕರ್​ ಅಧಿಕಾರದ ಮೇಲೆ ಇವತ್ತಿನ ತೀರ್ಪು ಬೆಳಕು ಚೆಲ್ಲಿದೆ ಎಂದ್ರು.

ವಿರೋಧ ಪಕ್ಷಗಳಿಂದ ಅತೃಪ್ತ ಶಾಸಕರಿಗೆ ಮಂಗನ ಟೋಪಿ

By

Published : Jul 17, 2019, 11:29 AM IST

Updated : Jul 17, 2019, 12:05 PM IST

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತು ನಿರ್ಧರಿಸುವ ಪರಮಾಧಿಕಾರವನ್ನು ಸ್ಪೀಕರ್​ಗೆ ಕೊಟ್ಟಿರುವ ಸುಪ್ರೀಂ ತೀರ್ಪನ್ನು ಸಚಿವ ಡಿ.ಕೆ. ಶಿವಕುಮಾರ್​ ಸ್ವಾಗತಿಸಿದ್ದಾರೆ.

ನ್ಯಾಯಪೀಠದಿಂದ ಅನ್ಯಾಯದ ತೀರ್ಪು ಬರಬಾರದೆಂಬುದನ್ನು ಸರ್ವೋಚ್ಚ ನ್ಯಾಯಾಲಯ ಇಂದು ಎತ್ತಿ ಹಿಡಿದಿದೆ. ಸ್ಪೀಕರ್​ ಅಧಿಕಾರ ಏನೆಂಬುದನ್ನು ಇಂದಿನ ತೀರ್ಪು ಒತ್ತಿ ಹೇಳಿದೆ. ಇದನ್ನೇ ನಾವು ವಾದಿಸುತ್ತಿದ್ದೆವು ಎಂದಿದ್ದಾರೆ. ಈಗಲೂ ನಾನು ಹೇಳುತ್ತಿರುವುದು ಇಷ್ಟೇ. ಮೈತ್ರಿ ಪಾಳಯದ ಶಾಸಕರ ಮೇಲೆ ವಿರೋಧ ಪಕ್ಷದವರು ಮಂಗನ ಟೋಪಿ ಹಾಕ್ತಿದ್ದಾರೆ ಅಂದ್ರು.

ವಿರೋಧ ಪಕ್ಷಗಳಿಂದ ಅತೃಪ್ತ ಶಾಸಕರಿಗೆ ಮಂಗನ ಟೋಪಿ

ನನ್ನೆಲ್ಲಾ ಶಾಸಕ ಸ್ನೇಹಿತರಿಗೆ ನಾನು ಹೇಳುತ್ತಿರುವುದು ಇಷ್ಟೆ. ಇದು ನಿಮ್ಮ ಮನೆ. ಇಲ್ಲಿಗೆ ವಾಪಸ್​ ಬನ್ನಿ ಎಂದು ಹೇಳಿದರು. ಸುಮ್ಮನೆ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ನಿಮ್ಮನ್ನು ಗೆಲ್ಲಿಸಿರೋ ಜನರ ಮುಖ ನೋಡಿ. ನಿಮ್ಮ ಕುಟುಂಬದವರ ಮುಖ ನೋಡಿ. ನೀವು ಅನರ್ಹತೆಯ ಅಸ್ತ್ರಕ್ಕೆ ಬಲಿಯಾಗಬೇಡಿ ಎಂದು ಸಚಿವ ಡಿಕೆ ಶಿವಕುಮಾರ್ ಮನವಿ ಮಾಡಿದ್ರು.

Last Updated : Jul 17, 2019, 12:05 PM IST

ABOUT THE AUTHOR

...view details