ಕರ್ನಾಟಕ

karnataka

ETV Bharat / state

ಬಿಬಿಎಂಪಿ ಪಕ್ಷೇತರ ಸದಸ್ಯರನ್ನು ನಾವೆಲ್ಲೂ ಕರೆದೊಯ್ದಿಲ್ಲ: ಶಾಸಕ ಸತೀಶ್ ರೆಡ್ಡಿ‌ ಸ್ಪಷ್ಟನೆ

ಬಿಬಿಎಂಪಿ ಪಕ್ಷೇತರ ಸದಸ್ಯರನ್ನು ನಾವು ಎಲ್ಲಿಯೂ ಕರೆದೊಯ್ದಿಲ್ಲ ಅವರು ರೆಸಾರ್ಟ್ ಗೆ ಹೋಗಿರುವುದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಸತೀಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶಾಸಕ ಸತೀಶ್ ರೆಡ್ಡಿ‌ ಮಾತನಾಡಿದ್ದಾರೆ

By

Published : Sep 20, 2019, 10:04 PM IST

ಬೆಂಗಳೂರು: ಬಿಬಿಎಂಪಿ ಪಕ್ಷೇತರ ಸದಸ್ಯರನ್ನು ನಾವು ಎಲ್ಲಿಯೂ ಕರೆದೊಯ್ದಿಲ್ಲ ಅವರು ರೆಸಾರ್ಟ್ ಗೆ ಹೋಗಿರುವುದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಸತೀಶ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಶಾಸಕ ಸತೀಶ್ ರೆಡ್ಡಿ‌ ಮಾತನಾಡಿದ್ದಾರೆ
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಪಕ್ಷೇತರ ಸದಸ್ಯರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ, ನಮ್ಮ ಸದಸ್ಯರಾಗಿದ್ದರೆ ನಾವು ಕರೆದೊಯ್ಯುತ್ತಿದ್ದೆವು. ಅವರು ಪಕ್ಷೇತರ ಸದಸ್ಯರು, ಸ್ವತಂತ್ರರು, ಅವರು ಎಲ್ಲಿ ಬೇಕಾದರೂ ಹೋಗಬಹುದು. ಅದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಆಪರೇಷನ್ ಕಮಲ ಆರೋಪವನ್ನು ತಳ್ಳಿಹಾಕಿದರು. ಮೇಯರ್ ಚುನಾವಣೆಗಾಗಿ ನಾವೇನು ಮಾಡಲ್ಲ. ಸೆಪ್ಟೆಂಬರ್ 27 ರಂದು ನಡೆಯುವ ಮೇಯರ್ ಚುನಾವಣೆ ವೇಳೆ ನಮಗೆ ಬಹುಮತ ಇದ್ದರೆ ಮಾತ್ರ ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ ಬಹುಮತ ಇಲ್ಲದಿದ್ದರೆ ನಾವು ಕ್ಲೈಮ್ ಮಾಡಲ್ಲ ಎಂದರು.

ABOUT THE AUTHOR

...view details