ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಭೇಟಿಯಾದ ಶಾಸಕ ಡಾ.ಸುಧಾಕರ್: ಮಂಡಳಿ‌ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಭಿನಂದನೆ - ಡಾ.ಸುಧಾಕರ್

ಈ ಹಿಂದೆ ಸಿದ್ದರಾಮಯ್ಯ ಅವರು ಡಾ.ಸುಧಾಕರ್​ಗೆ ಮಂಡಳಿ ಅಧ್ಯಕ್ಷ ಸ್ಥಾನ‌ ನೀಡುವ ಪರ ಬ್ಯಾಟಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ‌‌ ಸಿಎಂ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಸಿದ್ದರಾಮಯ್ಯ ಭೇಟಿಯಾದ ಶಾಸಕ ಡಾ.ಸುಧಾಕರ್

By

Published : Jun 21, 2019, 1:53 AM IST

ಬೆಂಗಳೂರು:ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ‌ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಡಾ.‌ ಸುಧಾಕರ್ ಮಾಜಿ ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾಗಿ ಅಭಿನಂದನೆ‌ ಸಲ್ಲಿಸಿದರು.

ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಡಾ.ಸುಧಾಕರ್​ಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಈ ವೇಳೆ ಅತೃಪ್ತ ಶಾಸಕ‌ ನಾಗೇಂದ್ರ ಕೂಡ ಉಪಸ್ಥಿತರಿದ್ದರು.

ಕೆಎಸ್​ಪಿಸಿಬಿಯ ಅಧ್ಯಕ್ಷ ಸ್ಥಾನ ಮೈತ್ರಿ ಪಕ್ಷದಲ್ಲಿನ ಸಂಘರ್ಷಕ್ಕೆ ಕಾರಣವಾಗಿತ್ತು. ಸಿಎಂ ಕುಮಾರಸ್ವಾಮಿ ಕೊನೆ ಕ್ಷಣದಲ್ಲಿ ಡಾ.ಸುಧಾಕರ್ ನೇಮಕವನ್ನು ರದ್ದುಗೊಳಿಸಿ, ನಿವೃತ್ತ ಅಧಿಕಾರಿ ಜಯರಾಂರನ್ನು ನೇಮಕ‌ ಮಾಡಿದ್ದರು. ಈ ವಿಚಾರ ಮೈತ್ರಿ ಪಕ್ಷಗಳ ಮಧ್ಯೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಶಾಸಕ ಡಾ.ಸುಧಾಕರ್ ಸಿಎಂರ ಈ ನಡೆ ಬಗ್ಗೆ ತೀವ್ರ ಆಕ್ಷೇಪ‌ ವ್ಯಕ್ತಪಡಿಸಿದ್ದರು ಜತೆಗೆ ರಾಜ್ಯ ಕೈ ನಾಯಕರ ಬಗ್ಗೆ ತಮ್ಮ ಅತೃಪ್ತಿ ಹೊರಹಾಕಿದ್ದರು.

ಇದೀಗ ಅತೃಪ್ತರನ್ನು ಸಮಾಧಾನ‌ ಪಡಿಸುವ ಕೆಲಸಕ್ಕೆ ಮೈತ್ರಿ ಸರ್ಕಾರ ಕೈ ಹಾಕಿದ್ದು, ಅದರ ಭಾಗವಾಗಿ ಡಾ.ಸುಧಾಕರ್​ರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸಿದ್ದರಾಮಯ್ಯ ಅವರು ಡಾ.ಸುಧಾಕರ್​ಗೆ ಮಂಡಳಿ ಅಧ್ಯಕ್ಷ ಸ್ಥಾನ‌ ನೀಡುವ ಪರ ಬ್ಯಾಟಿಂಗ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಡಾ.ಸುಧಾಕರ್ ಮಾಜಿ‌‌ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ABOUT THE AUTHOR

...view details