ಕರ್ನಾಟಕ

karnataka

ETV Bharat / state

ಲಾಕ್​ಡೌನ್​ಗೆ ಏರ್​ಪೋರ್ಟ್​ ರಸ್ತೆ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ - ಜನತೆ ಸಹಜ ಸ್ಥಿತಿಯಲ್ಲಿ ಓಡಾಡುತ್ತಿದ್ದರೆ

ಬಿಬಿಎಂಪಿ ನಿರ್ಲಕ್ಷ್ಯದಿಂದ ರಸ್ತೆ ಬದಿ ಹಣ್ಣು ಮಾರಾಟಗಾರರು, ಕಬ್ಬಿನ ಹಾಲಿನ ಅಂಗಡಿಗಳು ರಾಜಾರೋಷವಾಗಿ ತೆರೆದಿದ್ದವು. ಒಟ್ಟಾರೆಯಾಗಿ ಕೋವಿಡ್-19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಲಾಕ್ ಡೌನ್​​ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಿಶ್ರ ಪ್ರತಿಕ್ರಿಯೆ
ಮಿಶ್ರ ಪ್ರತಿಕ್ರಿಯೆ

By

Published : Mar 23, 2020, 6:50 PM IST

ಬೆಂಗಳೂರು: ಕೊರೊನಾ ಮಹಾಮಾರಿ ಭೀತಿ ಹಿನ್ನೆಯಲ್ಲಿ ರಾಜ್ಯ ಸರ್ಕಾರ ಮಾ. 31ರವರೆಗೆ ನಗರ ಸೇರಿದಂತೆ 9 ಜಿಲ್ಲೆಗಳಿಗೆ ಲಾಕ್ ಡೌನ್ ಘೋಷಣೆ ಮಾಡಿದೆ. ಆದರೆ, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳ ಒತ್ತಡದಲ್ಲಿ ರಸ್ತೆಗಿಳಿದಿದ್ದಾರೆ. ಏರ್‌ಪೋರ್ಟ್ ರಸ್ತೆಯ ಯಲಹಂಕ, ಬ್ಯಾಟರಾಯನಪುರ ಹೆಬ್ಬಾಳದಲ್ಲಿ ಲಾಕ್ ಡೌನ್​​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಯಲಹಂಕ ಹಳೇ ನಗರ ಸಂತೆ ಸರ್ಕಲ್​ನಲ್ಲಿ ಜನತೆ ಸಹಜ ಸ್ಥಿತಿಯಲ್ಲಿ ಓಡಾಡುತ್ತಿದ್ದರೆ, ಬಹುತೇಕ ಹೋಟೆಲ್​ಗಳು, ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಎನ್.ಇ.ಎಸ್‌, ಕೊಡಿಗೇಹಳ್ಳಿ ಸರ್ಕಲ್, ಬ್ಯಾಟರಾಯನಪುರ ಸರ್ಕಲ್​ಗಳಲ್ಲಿ ಖಾಸಗಿ ವಾಹನಗಳು ಸೇರಿದಂತೆ ಬಿಎಂಟಿಸಿ ಬಸ್ಸುಗಳ ಓಡಾಡ ಎಂದಿನಂತಿತ್ತು. ಇನ್ನು ಆರ್.ಎಂ.ಝಡ್ ಹಾಗೂ ಗರುಡಾ ಮಾಲ್, ಮೋರ್ ಮುಚ್ಚಿದ್ದರೆ, ಡಿ-ಮಾರ್ಟ್, ವಿಶಾಲ್ ಮಾರ್ಟ್, ರಾಯಲ್ ಮಾರ್ಟ್, ಲೋಯಲ್ ಸಿಟಿ, ದ ಬಿಗ್ ಮಾರ್ಟ್ ಸೇರಿ ಇನ್ನಿತರ ಸೂಪರ್ ಮಾರ್ಕೆಟ್​ಗಳು ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದವು.

ಲಾಕ್ ಡೌನ್​​ಗೆ ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

ಕೆಲವೇ ಕೆಲವು ಅಂಗಡಿಗಳನ್ನು ಹೊರತುಪಡಿಸಿದರೆ ಇನ್ನುಳಿದ ವರ್ತಕರು ತಮ್ಮ ಅಂಗಡಿಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಆದರೆ, ಬಿಬಿಎಂಪಿ ನಿರ್ಲಕ್ಷ್ಯದಿಂದ ರಸ್ತೆ ಬದಿ ಹಣ್ಣು ಮಾರಾಟಗಾರರು, ಕಬ್ಬಿನ ಹಾಲಿನ ಅಂಗಡಿಗಳು ರಾಜಾರೋಷವಾಗಿ ತೆರದಿದ್ದವು.

ABOUT THE AUTHOR

...view details