ಬೆಂಗಳೂರು: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆರೋಗ್ಯ ಇಲಾಖೆ ಬಿಡುಗಡೆ ಮಾಡುವ ಹೆಲ್ತ್ ಬುಲೆಟಿನ್ನಲ್ಲಿ ನೀಡುವ ರೋಗಿಗಳ ಕೋಡ್ ಸಂಖ್ಯೆಯಲ್ಲಿ ದೋಷ ಕಂಡುಬರುತ್ತಿದೆ. ಇದು ಪಾಲಿಕೆ ಆರೋಗ್ಯಧಿಕಾರಿಗಳಿಗೆ ರೋಗಿಗಳನ್ನು ಪತ್ತೆ ಮಾಡುವಲ್ಲಿ ಗೊಂದಲ ಹುಟ್ಟಿಸುತ್ತಿದೆ. ಕಳೆದ ಮೂರು ದಿನದಿಂದ ಈ ಗೊಂದಲಗಳಾಗುತ್ತಿವೆ ಎಂದು ಆರೋಗ್ಯಧಿಕಾರಿ ತಿಳಿಸಿದ್ದಾರೆ.
ಜೆ.ಜೆ.ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪೇಷೆಂಟ್ ಕೋಡ್ನಲ್ಲಿಯೂ ಬೆಳಗ್ಗೆ ಒಂದು ಕೋಡ್, ಸಂಜೆ ಒಂದು ಕೋಡ್ ನೀಡಿ ಗೊಂದಲವಾಗಿತ್ತು. ಅಲ್ಲದೆ ಪಾದರಾಯನಪುರದ ಗರ್ಭಿಣಿ P- 2898 ಹಾಗೂ P- 2897 ರೋಗಿಗಳು ಆಸ್ಪತ್ರೆಗೆ ದಾಖಲಾದ ಎರಡೇ ದಿನದಲ್ಲಿ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಕೋವಿಡ್ ಆಸ್ಪತ್ರೆಯಲ್ಲಿದ್ದ ಕೊರೊನಾ ಪಾಸಿಟಿವ್ ರೋಗಿಗಳ ಜೊತೆಗಿದ್ದು ಬಂದಿದ್ದರಿಂದ ಇವರೆಷ್ಟು ಸೇಫ್ ಎನ್ನುವ ಆತಂಕ ಹುಟ್ಟಿಸಿದೆ.
ಇಂದು ಯಶವಂತಪುರದ ಎಪಿಎಂಸಿ ನೌಕರ (P-2796) ಸಂಪರ್ಕದಿಂದ ಮೂರು ಜನರಿಗೆ ಮಾತ್ರ ಕೊರೊನಾ ಬಂದಿದೆ. ಆದರೆ ಅಗ್ರಹಾರ ದಾಸರಹಳ್ಳಿಯ P- 3411 ಮಹಿಳೆಯನ್ನು ಕೂಡಾ ಇವರದೇ ಸಂಪರ್ಕಕ್ಕೆ ಸೇರಿಸಿ ಎಡವಟ್ಟು ಮಾಡಿದೆ. ಅಸಲಿಯಾಗಿ P-3411 38 ವರ್ಷದ ಮಹಿಳಾ ಪೇಷೆಂಟ್ ಸಂಖ್ಯೆ 3334 ವ್ಯಕ್ತಿಯ ಪತ್ನಿಯಾಗಿದ್ದಾರೆ ಎಂದು ಪಾಲಿಕೆ ಅಧಿಕಾರಿ ಮನೋರಂಜನ್ ಹೆಗಡೆ ಸ್ಪಷ್ಟಪಡಿಸಿದರು.
ಅಗ್ರಹಾರ ದಾಸರಹಳ್ಳಿಯ ಪೇಷೆಂಟ್ 2519 ಸಂಪರ್ಕದಿಂದ 45 ವರ್ಷದ ವ್ಯಕ್ತಿ ಹಾಗೂ 40 ವರ್ಷದ ಮಹಿಳೆಗೆ ಇಂದು ಕೊರೊನಾ ದೃಢಪಟ್ಟಿದೆ. ಇದನ್ನು ಹೊರತುಪಡಿಸಿ ಮೂವರು ದೆಹಲಿಯಿಂದ ವಾಪಸ್ಸಾದವರು ಹಾಗೂ ಒಬ್ಬರು ಮಹಾರಾಷ್ಟ್ರದಿಂದ ವಾಪಸ್ಸಾದವರಿಗೆ ಕೊರೊನಾ ಸೋಂಕು ಕಂಡುಬಂದಿದೆ.
ಇಂದಿನ ಕೋವಿಡ್ ಪಾಸಿಟಿವ್ ವಿವರ:
P-3435 , 45 ವರ್ಷದ ಗಂಡು- P-2519 ರ ಸಂಪರ್ಕ
P-3796 - 40 ವರ್ಷದ ಹೆಣ್ಣು -P- 2519 ರ ಸಂಪರ್ಕ
P-3411, 38 ವರ್ಷದ ಹೆಣ್ಣು -P-2796 ರ ಸಂಪರ್ಕ (ಸರಿಯಾದ ಮಾಹಿತಿ-ಸಂಪರ್ಕ-3334 ಅಗ್ರಹಾರ ದಾಸರಹಳ್ಳಿ 105)
P-3470 , 38 ವರ್ಷದ ಹೆಣ್ಣು -P-2796 ರ ಸಂಪರ್ಕ
P-3471 -17 ವರ್ಷದ ಗಂಡು- P-2796 ರ ಸಂಪರ್ಕ
P-3472 - 24 ವರ್ಷದ ಹೆಣ್ಣು - P- 2796 ರ ಸಂಪರ್ಕ
P-3658 - 37 ವರ್ಷದ ಹೆಣ್ಣು - P- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
P- 3720 - 35 ವರ್ಷದ ಗಂಡು- ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
P- 3721 - 65 ವರ್ಷದ ಹೆಣ್ಣು - ಮಹಾರಾಷ್ಟ್ರ ದಿಂದ ಹಿಂದಿರುಗಿದವರು.
P- 3722 - 25 ವರ್ಷದ ಗಂಡು- ದೆಹಲಿಯಿಂದ ವಾಪಸ್ಸಾದವರು
P- 3794 -30 ವರ್ಷದ ಗಂಡು- ದೆಹಲಿಯಿಂದ ವಾಪಸ್ಸಾದವರು
P- 3795- 23 ವರ್ಷದ ಹೆಣ್ಣು - ದೆಹಲಿಯಿಂದ ವಾಪಸ್
ಒಟ್ಟು ನಗರದಲ್ಲಿ 398 ಜನ ಪಾಸಿಟಿವ್ ಪ್ರಕರಣಗಳಿದ್ದು, 234 ಸಕ್ರಿಯ ಪ್ರಕರಣಗಳಿವೆ. 23 ಪ್ರದೇಶಗಳನ್ನು ಕಂಟೇನ್ಮೆಂಟ್ ಮಾಡಲಾಗಿದೆ.