ಕರ್ನಾಟಕ

karnataka

ETV Bharat / state

ಬೆಳ್ಳಂಬೆಳಗ್ಗೆ ಬಿಎಸ್​ವೈ ನಿವಾಸಕ್ಕೆ ದೌಡಾಯಿಸಿದ ಸಚಿವತ್ರಯರು

ಬಿ. ಶ್ರೀರಾಮುಲು ಡಿಸಿಎಂ ಸ್ಥಾನ ಸಿಗದ ಹಿನ್ನೆಲೆ ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಖಾತೆ ಹಂಚಿಕೆ ನಂತರ ಬಿಜೆಪಿಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ ಈ ಭೇಟಿ ಪ್ರಮುಖವಾಗಿದೆ.

ಬಿಜೆಪಿ ಸಚಿವರು

By

Published : Aug 27, 2019, 9:49 AM IST

ಬೆಂಗಳೂರು:ಸಚಿವರಾದ ಬಿ. ಶ್ರೀರಾಮುಲು, ಸಿ.ಸಿ. ಪಾಟೀಲ್ ಹಾಗೂ ವಿ. ಸೋಮಣ್ಣ ಅವರು ಇಂದು ಬೆಳಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪನವರ ಡಾಲರ್ಸ್ ಕಾಲೊನಿ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.

ಬಿ. ಶ್ರೀರಾಮುಲು ಡಿಸಿಎಂ ಸ್ಥಾನ ಸಿಗದ ಹಿನ್ನೆಲೆ ಸಿಎಂ ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಖಾತೆ ಹಂಚಿಕೆ ನಂತರ ಬಿಜೆಪಿಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆ ಈ ಭೇಟಿ ಮಹತ್ವ ಪಡೆದಿದೆ. ಬಿ. ಶ್ರೀರಾಮುಲು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಡಿಸಿಎಂ ಪಟ್ಟ ಸಿಗದ ಹಿನ್ನೆಲೆ ವಾಲ್ಮೀಕಿ ಜನಾಂಗದವರ ಅಸಮಾಧಾನ, ಬೇಸರ, ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದ ಆರೋಪ, ಆಕ್ರೋಶಕ್ಕೆ ಸಮಜಾಯಿಷಿ ನೀಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಶ್ರೀರಾಮುಲು ಹೊರಟ ಬೆನ್ನಲ್ಲೇ ಮನೆಯಿಂದ ಹೊರಟ ಸಿಎಂ ಯಡಿಯೂರಪ್ಪಗೆ ಸಚಿವರಾದ ವಿ ಸೋಮಣ್ಣ, ಕೋಟಾ ಶ್ರೀನಿವಾಸ್ ಪೂಜಾರಿ, ಸಿಸಿ ಪಾಟೀಲ್, ಬಿಜೆಪಿ ಮುಖಂಡ ಬಿ ವೈ ವಿಜಯೇಂದ್ರ, ಸಂಸದೆ ಶೋಭಾ ಕರಂದ್ಲಾಜೆ ಸಾಥ್ ನೀಡಿದ್ದಾರೆ.

ಸಿಎಂ ಜಯನಗರದ ಸುತ್ತೂರು ಮಠಕ್ಕೆ ತೆರಳಿದರು. ಅವರ ಬೆನ್ನಲ್ಲೇ ಸಚಿವ ಬಸವರಾಜ್ ಬೊಮ್ಮಾಯಿ ಅವರೂ ಜಯನಗರದತ್ತ ತೆರಳಿದರು. ಅವರೆಲ್ಲ ಸುತ್ತೂರು ಶ್ರೀಗಳು ಮತ್ತು ಇಶಾ ಫೌಂಡೇಶನ್​ನ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಸಿಎಂ ಜಯನಗರದ ಜೆಎಸ್​ಎಸ್​ ಶಿಕ್ಷಣ ಸಂಸ್ಧೆಯ ಕ್ಯಾಂಪಸ್​ನಲ್ಲಿ ಭೇಟಿ ಮಾಡಿದ್ದಾರೆ.

ABOUT THE AUTHOR

...view details