ಕೆಆರ್ ಪುರ:ಕೋವಿಡ್-19 ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಮತ್ತೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಒಂದು ವಾರ ಲಾಕ್ ಡೌನ್ ಜಾರಿಗೊಳಿಸಿದೆ. ಈ ಸಮಯದಲ್ಲಿ ವಿನಾಕಾರಣ ವಾಹನ ಸವಾರರು ಸಂಚರಿಸುತ್ತಿದ್ದು, ಇದನ್ನು ನಿಯಂತ್ರಿಸುವ ಸಲುವಾಗಿ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಖುದ್ದು ರಸ್ತೆಗಿಳಿದಿದ್ದರು.
ಬೆಂಗಳೂರು; ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಸಚಿವರ ಖಡಕ್ ವಾರ್ನಿಂಗ್ - Lockdown in Bangalore news
ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವಂತೆ ಕೆ.ಆರ್.ಪುರ ಸಂಚಾರಿ ಪೊಲೀಸರಿಗೆ ಸೂಚಿಸಿದರು.
ವಾಹನ ಸವಾರರಿಗೆ ಸಚಿವರ ಖಡಕ್ ವಾರ್ನಿಂಗ್
ಲಾಕ್ಡೌನ್ ಸಮಯದಲ್ಲಿ ವಿನಾಕಾರಣ ರಸ್ತೆಗಿಳಿದ ವಾಹನ ಸವಾರರಿಗೆ ಖಡಕ್ ವಾರ್ನಿಂಗ್ ಮಾಡಿ, ಲಾಕ್ಡೌನ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಮಹದೇವಪುರ ವಲಯದಲ್ಲಿ ಕೊರೊನಾ ನಿಯಂತ್ರಣ ಸಭೆ ಮುಗಿಸಿ ವಾಪಸ್ ಆಗುವ ಸಮಯದಲ್ಲಿ ಸಾಕಷ್ಟು ವಾಹನಗಳು ಮಾರತಹಳ್ಳಿ ರಿಂಗ್ ರೋಡ್ನಲ್ಲಿ ಸಂಚರಿಸುತ್ತಿರುವುದನ್ನು ಕಂಡು, ವಾಹನ ಸವಾರರ ತಪಾಸಣೆ ನಡೆಸಿದರು.
ಈ ವೇಳೆ ಅನವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು ದಂಡ ವಿಧಿಸುವಂತೆ ಕೆ.ಆರ್. ಪುರ ಸಂಚಾರಿ ಪೊಲೀಸರಿಗೆ ಸೂಚಿಸಿದರು.