ಕರ್ನಾಟಕ

karnataka

ETV Bharat / state

ಮೈಸೂರು ದಸರಾವನ್ನು ಎಂದಿನಂತೆ ಆಚರಿಸಲಾಗುವುದು: ವಿ. ಸೋಮಣ್ಣ - Housing minister V somanna

ದಸರಾ ನಾಡಹಬ್ಬ ಆಗಿರುವುದರಿಂದ ಈ ವರ್ಷವೂ ಕೂಡ ಉತ್ಸವವನ್ನು ಪಾರಂಪರಿಕ ಮಹತ್ವದ ದೃಷ್ಟಿಯಿಂದ ಆಚರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ವಸತಿ ಸಚಿವ ವಿ ಸೋಮಣ್ಣ

By

Published : Sep 2, 2019, 9:02 PM IST

ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ದಸರಾ ಉತ್ಸವವನ್ನು ಅದರ ಪಾರಂಪರಿಕ ಹಿನ್ನೆಲೆ ಪ್ರಕಾರವೇ ಆಚರಿಸಲಾಗುವುದು. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಲಾಗುತ್ತಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಗೋವಿಂದರಾಜ ನಗರದಲ್ಲಿ ತಮ್ಮ ನೂತನ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ನಾಡಹಬ್ಬ ದಸರಾ ಪಾರಂಪರಿಕ ಹಬ್ಬವಾಗಿದ್ದು, ಸಿ ಎಂ ಯಡಿಯೂರಪ್ಪನವರ ಸೂಚನೆಯಂತೆ ಆಚರಿಸುತ್ತೇವೆ ಎಂದರು.

ಗೋವಿಂದರಾಜ್​ ನಗರದಲ್ಲಿ ನೂತನ ಕಚೇರಿ ಉದ್ಘಾಟಿಸಿದ ವಸತಿ ಸಚಿವ ವಿ. ಸೋಮಣ್ಣ

ಮುಖ್ಯಮಂತ್ರಿ ಅವರು ಪ್ರವಾಹದ ಹಾನಿ ಬಗ್ಗೆ ಮಾಹಿತಿಯನ್ನು ಕೇಳಿದ್ದಾರೆ. ಅದನ್ನು ನಾನು ಅವರಿಗೆ ನೀಡಿದ್ದೇನೆ. ದಸರಾ ಹಬ್ಬ ಮುಗಿದ ನಂತರ ಅಕ್ಟೋಬರ್ ತಿಂಗಳಲ್ಲಿ ಉತ್ತರ ಕರ್ನಾಟಕದ ಎಲ್ಲಾ ಭಾಗಗಳಿಗೆ ಭೇಟಿ ನೀಡಿ ಪ್ರಧಾನಿಯವರ ಆಶಯವನ್ನು ಅನುಷ್ಠಾನಕ್ಕೆ ತರಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಸೋಮಣ್ಣ ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.

ABOUT THE AUTHOR

...view details