ಬೆಂಗಳೂರು: ಖಾತೆ ಮರು ಹಂಚಿಕೆ ಸಂಬಂಧ ದೊಡ್ಡ ಮಟ್ಟದ ಅಸಮಾಧಾನ ಇಲ್ಲವೆಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದರು.
ಓದಿ: ನಮ್ಮಲ್ಲಿ ಖಾತೆ ಕ್ಯಾತೆ ಇಲ್ಲ, ಎಲ್ಲರನ್ನೂ ತೃಪ್ತಿಪಡಿಸಲು ದೇವರಿಂದಲೂ ಸಾಧ್ಯವಿಲ್ಲ: ಆರ್.ಅಶೋಕ್

ವಿಧಾನಸೌಧಲ್ಲಿ ಮಾತನಾಡಿದ ಅವರು, ಖಾತೆ ಮರು ಹಂಚಿಕೆ ಬಗ್ಗೆ ಕೆಲವರಿಗೆ ಅಸಮಧಾನವಿದ್ದರೆ, ಅವರನ್ನೇ ಕೇಳಿ. ಅಂತಹ ದೊಡ್ಡಮಟ್ಟದ ಅಸಮಾಧಾನ ಯಾವುದೂ ಇಲ್ಲ ಎಂದರು.
ನಾನು ರಾಜ್ಯದ ಸಚಿವನಾಗಿ ಆತ್ಮಸಾಕ್ಷಿಯಂತೆ ಸಂತೋಷವಾಗಿದ್ದೇನೆ. ಬಿಪಿಎಲ್ ಕಾರ್ಡುದಾರರಿಗೆ ಅನುಕೂಲ ಮಾಡುತ್ತೇನೆ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಈ ಹಿಂದೆ 13 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಮಂತ್ರಿ ಸ್ಥಾನ ನನಗೆ ಹೊಸದೇನು ಅಲ್ಲ ಎಂದು ಕತ್ತಿ ಹೇಳಿದರು.