ಕರ್ನಾಟಕ

karnataka

ETV Bharat / state

ಇನ್ಮುಂದೆ ರೈತ ಕುಟುಂಬಗಳ ಮನೆ ಬಾಗಿಲಿಗೆ ದಾಖಲೆ: ಸಚಿವ ಆರ್​​. ಅಶೋಕ್

ಕೆಲವರಿಗೆ ದಾಖಲೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಎಲ್ಲರಿಗೂ ಮಾಹಿತಿ ತಿಳಿಯಲು ದಾಖಲೆ ನೀಡುತ್ತೇವೆ. ರೈತರಿಗೆ ನಾವು ಮಾಹಿತಿ ಹಕ್ಕು ನೀಡುತ್ತೇವೆ. ಇದಕ್ಕೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ನಾನು ಮತ್ತು ಮುಖ್ಯಮಂತ್ರಿಗಳು ಸ್ವತಃ ತೆರಳಿ ರೈತರ ಮನೆ ಬಾಗಿಲಿಗೆ ನೀಡುತ್ತೇವೆ. ದಾಖಲೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತೇವೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್ ಸುದ್ದಿ ಗೋಷ್ಠಿ
ಕಂದಾಯ ಸಚಿವ ಆರ್ ಅಶೋಕ್ ಸುದ್ದಿ ಗೋಷ್ಠಿ

By

Published : Jan 20, 2022, 5:16 PM IST

ಬೆಂಗಳೂರು : ಮನೆ ಬಾಗಿಲಿಗೆ ರೈತ ಕುಟುಂಬಗಳ ದಾಖಲೆಗಳನ್ನು ತಲುಪಿಸುವ ವಿನೂತನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 45-50 ಲಕ್ಷ ರೈತ ಕುಟುಂಬಗಳಿಗೆ ದಾಖಲೆ ಪಡೆಯವುದಕ್ಕೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಈ ವರ್ಷದಿಂದ ರೈತರ ಮನೆ ಬಾಗಿಲಿಗೆ ದಾಖಲೆ ನೀಡಲಾಗುತ್ತಿದೆ. ಕಂದಾಯ ಇಲಾಖೆ ಎಲ್ಲ ದಾಖಲೆ ಮನೆ ಬಾಗಿಲಿಗೆ ತಲುಪುತ್ತದೆ. ಒಂದೇ ದಿನದಲ್ಲಿ ದಾಖಲೆ ತಲುಪುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಕಂದಾಯ ಸಚಿವ ಆರ್ ಅಶೋಕ್ ಸುದ್ದಿ ಗೋಷ್ಠಿ

ಕೆಲವರಿಗೆ ದಾಖಲೆಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಹೀಗಾಗಿ ಎಲ್ಲರಿಗೂ ಮಾಹಿತಿ ತಿಳಿಯಲು ದಾಖಲೆ ನೀಡುತ್ತೇವೆ. ರೈತರಿಗೆ ನಾವು ಮಾಹಿತಿ ಹಕ್ಕು ನೀಡುತ್ತೇವೆ. ಇದಕ್ಕೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ. ನಾನು ಮತ್ತು ಮುಖ್ಯಮಂತ್ರಿಗಳು ಸ್ವತಃ ತೆರಳಿ ರೈತರ ಮನೆ ಬಾಗಿಲಿಗೆ ನೀಡುತ್ತೇವೆ. ದಾಖಲೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತೇವೆ ಎಂದರು.

ಜನವರಿ 26ಕ್ಕೆ ಈ ಕಾರ್ಯಕ್ರಮ ನಡೆಸಬೇಕಿತ್ತು. ಆದರೆ, ಕೋವಿಡ್ ಹೆಚ್ಚಳ ಕಾರಣದಿಂದ ಆ ದಿನಾಂಕ ಬದಲಿಸಿದ್ದು, ಕೋವಿಡ್ ಕಡಿಮೆಯಾದ ಬಳಿಕ ದಾವಣಗೆರೆಯ ಒಂದು ಹಳ್ಳಿಯನ್ನು ಆಯ್ಕೆ ಮಾಡಿ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದರು.

ಇನಾಂತಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರು ಅರ್ಜಿ ಹಾಕಿಕೊಳ್ಳಲು ಇನ್ನೂ ಒಂದು ವರ್ಷ ಅವಕಾಶ ಮಾಡಿಕೊಟ್ಟಿದ್ದೇನೆ. ಆ ಕುರಿತು ಗೆಜೆಟ್ ನೋಟಿಫಿಕೇಷನ್ ಆಗಿದೆ. ಕೇಂದ್ರ ಸರ್ಕಾರದ ಅನುದಾನದ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಡ್ರೋಣ್ ಮೂಲಕ ಸರ್ವೆ ಮಾಡುತ್ತೇವೆ. ಸುಮಾರು 287 ಕೋಟಿ ರೂ.ಗಳ ವೆಚ್ಚದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಡ್ರೋಣ್ ಮೂಲಕ ಸರ್ವೆ ಮಾಡಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಇಡುತ್ತೇವೆ. ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಈ ಕಾರ್ಯವನ್ನು ಸದ್ಯದಲ್ಲೇ ಪ್ರಾರಂಭಿಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಂಜಾರ ತಾಂಡ, ಕುರುಬರ ಹಟ್ಟಿಗಳಂತಹ ನೂರಾರು ವರ್ಷಗಳಿಂದ ನೆಲೆಸಿರುವ ಜನರ ಅನುಕೂಲಕ್ಕಾಗಿ ಆ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾಡುತ್ತೇವೆ. ಇಂತಹ ನೂರಾರು ಪ್ರಕರಣಗಳನ್ನು ನೋಟಿಫೈ ಮಾಡುವುದಕ್ಕೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೂಡಲೇ ನೋಟಿಫೈ ಮಾಡಿ ಗೆಜೆಟ್ ಹೊರಡಿಸಿ ಸರ್ವೆ ಮಾಡಬೇಕು ಎಂದು ಹೇಳಿದರು.

ABOUT THE AUTHOR

...view details