ಕರ್ನಾಟಕ

karnataka

ETV Bharat / state

ಚವ್ಹಾಣ್​ - ಸಿಎಂ ಯೋಗಿ ಭೇಟಿ; ಗೋಹತ್ಯೆ ಕಾಯ್ದೆ ಕುರಿತು ಸಮಾಲೋಚನೆ - Prabhu Chauhan and CM Yogi Adityanath

ರಾಜ್ಯದಲ್ಲಿ ಗೋಹತ್ಯೆ ನಿಷೇಧವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಗುಜರಾತ್ ಮತ್ತು ಉತ್ತರ ಪ್ರದೇಶದ ಪ್ರವಾಸದಲ್ಲಿರುವ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಇಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

Minister Prabhu Chauhan Meeting with CM Yogi Adityanath
ಸಚಿವ ಪ್ರಭು ಚೌವ್ಹಾಣ್ ಮತ್ತು ಸಿಎಂ ಯೋಗಿ ಆದಿತ್ಯನಾಥ್​

By

Published : Dec 3, 2020, 7:16 PM IST

ಬೆಂಗಳೂರು:ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅತ್ಯಂತ ಕಠಿಣವಾಗಿ ಜಾರಿಗೊಳಿಸಲಾಗಿದ್ದು ಕರ್ನಾಟಕದಲ್ಲಿಯೂ ಗೋಹತ್ಯೆ ನಿಷೇಧ ತರಲು ಉದ್ದೇಶಿಸಿರುವುದಕ್ಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸಂತಸ ವ್ಯಕ್ತಪಡಿಸಿದ್ದಾರೆ.

ಗುಜರಾತ್ ಮತ್ತು ಉತ್ತರಪ್ರದೇಶದ ಪ್ರವಾಸದಲ್ಲಿರುವ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಉತ್ತರಪ್ರದೇಶದ ಭೇಟಿಯ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿ ಗೋಹತ್ಯೆ ನಿಷೇಧ ಕಾಯ್ದೆಯ ಕುರಿತಾಗಿ ಸುಧೀರ್ಘವಾಗಿ ಚರ್ಚೆ ನಡೆಸಿದರು.

ಉತ್ತರಪ್ರದೇಶದಲ್ಲಿ ಗೋಹತ್ಯೆಗೆ ಸಂಬಂಧಪಟ್ಟಂತೆ ಅತ್ಯಂತ ಕಠಿಣ ಕ್ರಮಗಳನ್ನು ಜರುಗಿಸಲಾಗಿದ್ದು, ಗೊಹತ್ಯೆ ನಿಷೇಧ ಯಶಸ್ವಿಯಾಗಿ ಜಾರಿಯಲ್ಲಿದೆ, ಅಲ್ಲದೇ ಕರ್ನಾಟಕ ಸರ್ಕಾರ ಕೂಡ ಇದೇ ಮಾದರಿಯಲ್ಲಿ ಕಾಯ್ದೆ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆಶಯ ವ್ಯಕ್ತಪಡಿಸಿದರು.

ಗೋಹತ್ಯೆ ಕಾಯ್ದೆ ಉತ್ತರಪ್ರದೇಶದಲ್ಲಿ ಅನುಷ್ಠಾನವಾದ ರೀತಿಯ ಬಗ್ಗೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದರು. ಈ ಸಂಧರ್ಭದಲ್ಲಿ ಗೋಶಾಲೆಗಳ ನಿರ್ವಹಣೆ ಮತ್ತು ಗೋವುಗಳ ಆರೈಕೆಯ ಬಗ್ಗೆ ಸಹ ಸಚಿವರು ಮಾಹಿತಿ ಪಡೆದರು.

ಇದನ್ನೂ ಓದಿ: ಪಶುಗಳ‌ ಆರೋಗ್ಯಕ್ಕಾಗಿ ಪ್ರತ್ಯೇಕ ವಾರ್ ರೂಂ ಆರಂಭಿಸುತ್ತೇವೆ: ಸಚಿವ ಪ್ರಭು ಚೌವ್ಹಾಣ್

ಉತ್ತಮ ದೇಶಿ ಗೋವು ತಳಿಗಳ ಅಭಿವೃದ್ಧಿಯ ಕುರಿತು ಉತ್ತರಪ್ರದೇಶ ಪಶುಸಂಗೋಪನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಅತ್ಯುತ್ತಮ ಉತ್ಪಾದನಾ ಸಾಮರ್ಥ್ಯ ಹೊಂದಿದ ಸಾಹಿವಾಲ್ ತಳಿಯ ಎರಡು ಹೋರಿಗಳು ಹಾಗೂ ಹತ್ತು ಹಸುಗಳನ್ನು ಕರ್ನಾಟಕ ರಾಜ್ಯಕ್ಕೆ ಒದಗಿಸಲು ಹಿರಿಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿರುತ್ತಾರೆ.

ಇದೇ ವೇಳೆ, ಉತ್ತರಪ್ರದೇಶದ ರವಣಖೇಡ ಬುಲ್ ಫಾರ್ಮ್ ಹಾಗೂ ಸಾಹಿವಾಲ್ ಅಂಬ್ಯುಲರ್ ಟ್ರಾನ್ಸಫರ್ ಟೆಕ್ನಾಲಜಿ ಕ್ಷೇತ್ರಗಳಿಗೆ ಸಚಿವರು ಭೇಟಿ ನೀಡಿದರು.

ABOUT THE AUTHOR

...view details