ಕರ್ನಾಟಕ

karnataka

ETV Bharat / state

ಬಿಜೆಪಿ ಬಿಟ್ಟು ಮನೆಗೆ ಹೋಗುತ್ತೇನೆ.. ಆದರೆ, ಬೇರೆ ಪಾರ್ಟಿಗೆ ಹೋಗಲ್ಲ.. ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು ಗ್ರಾಮಾಂತರ ಇದ್ದಿದ್ರೆ ಚೆನ್ನಾಗಿ ಇತ್ತು. ನಾನು ಜನರಿಂದ ಗೆದ್ದು ಬಂದಿಲ್ಲ. ಪರಿಷತ್​ಗೆ ಎಂಎಲ್​ಸಿ ಆಗಿ ಆಯ್ಕೆಯಾಗಿ ಬಂದದ್ದು. ಮುಂದಿನ ಚುನಾವಣೆಗಾಗಿ ನಾನು ಅಲ್ಲೇ ಇದ್ದು ಕೆಲಸ ಮಾಡಿದ್ರೆ ಚೆನ್ನಾಗಿ ಇತ್ತು. ನನ್ನ ಮನಸ್ಸಿನಲ್ಲಿ ಇದ್ದದ್ದು ನಾನು ಸಿಎಂ ಬಳಿ ಹೇಳಿದ್ದೇನೆ..

minister-mtb-nagaraj
ಸಚಿವ ಎಂಟಿಬಿ ನಾಗರಾಜ್

By

Published : Jan 25, 2022, 5:23 PM IST

ಬೆಂಗಳೂರು :ಪಾರ್ಟಿ ಬಿಟ್ಟು ಮನೆಗೆ ಹೋಗ್ತಿನಿ. ಆದರೆ, ಬೇರೆ ಪಾರ್ಟಿಗೆ ಹೋಗಲ್ಲ. ಇದೇ ಪಕ್ಷದಲ್ಲೇ ಇದ್ದು, ಜನರ ಸೇವೆ ಮಾಡುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.

ಮತ್ತೆ ಬೇರೆ ಪಾರ್ಟಿ ಸೇರೋದಿಲ್ಲ ಅಂತಾ ಸ್ಪಷ್ಟನೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರು..

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲವರು ಕಾಂಗ್ರೆಸ್‌ಗೆ ಹೋಗ್ತಾರೆ ಅನ್ನೋ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರಿಗೆ ಮಾಹಿತಿ ಇದ್ರೂ ಇರಬಹುದು. ನನಗೆ ಗೊತ್ತಿಲ್ಲ. ಪಾರ್ಟಿ ಬಿಟ್ಟು ಮನೆಗೆ ಹೋಗ್ತಿನಿ.

ಆದರೆ, ಬೇರೆ ಪಾರ್ಟಿಗೆ ಹೋಗಲ್ಲ. ನಾನು ಯಾವ ದೇವರ ಮೇಲೆ ಆದರೂ ಪ್ರಮಾಣ ಮಾಡುತ್ತೇನೆ. ಈವರೆಗೂ ನಾನು ಕಾಂಗ್ರೆಸ್​ನ ಯಾವುದೇ ನಾಯಕರ ಜೊತೆ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ಮಾಡಿದ್ದೇನೆ. ಸಿದ್ದರಾಮಯ್ಯ ನಿನ್ನೆ ಬಾದಾಮಿಯಿಂದ ಕರೆ ಮಾಡಿದ್ರು. ಅಧಿಕಾರಿಗಳ ನೇಮಕ ಸಂಬಂಧ ಚರ್ಚೆ ಮಾಡಿದ್ರು. ಹಾಗಂತಾ, ಬೇರೆ ಯಾವುದೇ ವಿಷಯಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು, ವರಿಷ್ಠರ ತೀರ್ಮಾನಕ್ಕೆ ನನ್ನ ಸಹಮತ ಇದೆ. ಇಷ್ಟು ದಿನ ಬೆಂಗಳೂರು ಗ್ರಾಮಾಂತರ ಇತ್ತು. ಈಗ ಚಿಕ್ಕಬಳ್ಳಾಪುರ ನೀಡಿದ್ದಾರೆ. ಸುಧಾಕರ್​ಗೆ ಬೆಂಗಳೂರು ಗ್ರಾಮಾಂತರ ನೀಡಿದ್ದಾರೆ. ಯಾಕೆ ಬದಲಾವಣೆ ಮಾಡಿದ್ದಾರೆ ಅಂತಾ ಕಾರಣಗಳು ನನಗೂ ಗೊತ್ತಿಲ್ಲ ಎಂದು ತಿಳಿಸಿದರು.

ಪಕ್ಷಾಂತರ ಚರ್ಚೆ ಕೇಳಿ ಬಂದಿರುವ ಕುರಿತಂತೆ ಸಚಿವ ಎಂಟಿಬಿ ನಾಗರಾಜ್ ಮಾತನಾಡಿರುವುದು..

ಪಕ್ಷದ ಹಾಗೂ ಚುನಾವಣಾ ಹಿತದೃಷ್ಟಿಯಿಂದ ಪಕ್ಷ ಕಟ್ಟುವ ಹಿತ ದೃಷ್ಟಿಯಿಂದ ಮಾಡಿದ್ದಾರೆ. ಬದಲಾವಣೆ ಮಾಡುತ್ತಾರೆ ಅಂತಾ ನಿರೀಕ್ಷೆ ಇರಲಿಲ್ಲ. ಮುಖ್ಯಮಂತ್ರಿಗಳ ಭೇಟಿ ಮಾಡಿ ತಾಲೂಕು ಅಭಿವೃದ್ಧಿ, ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ತೀರ್ಮಾನವನ್ನು ತೆಗೆದುಕೊಂಡು ಬದಲಾವಣೆ ಮಾಡಿದ್ದಾರೆ ಎಂದರು.

ಬೆಂಗಳೂರು ಗ್ರಾಮಾಂತರ ಇದ್ದಿದ್ರೆ ಚೆನ್ನಾಗಿ ಇತ್ತು. ನಾನು ಜನರಿಂದ ಗೆದ್ದು ಬಂದಿಲ್ಲ. ಪರಿಷತ್​ಗೆ ಎಂಎಲ್​ಸಿ ಆಗಿ ಆಯ್ಕೆಯಾಗಿ ಬಂದದ್ದು. ಮುಂದಿನ ಚುನಾವಣೆಗಾಗಿ ನಾನು ಅಲ್ಲೇ ಇದ್ದು ಕೆಲಸ ಮಾಡಿದ್ರೆ ಚೆನ್ನಾಗಿ ಇತ್ತು. ನನ್ನ ಮನಸ್ಸಿನಲ್ಲಿ ಇದ್ದದ್ದು ನಾನು ಸಿಎಂ ಬಳಿ ಹೇಳಿದ್ದೇನೆ ಎಂದು ತಿಳಿಸಿದರು.

ವಲಸಿಗರಿಗೆ ಸಂಪುಟದಿಂದ ಕೈ ಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಲಸಿಗರು ಮಂತ್ರಿಯಾಗಿ ಮುಂದುವರೆಸಿ ಅಂದ್ರೂ ಸಂತೋಷ. ಪಕ್ಷದ ಕೆಲಸ ಮಾಡು ಅಂದ್ರೂ ಸಂತೋಷ. 40 ವರ್ಷ ನಾನು ಕಾಂಗ್ರೆಸ್​ನಲ್ಲಿ ಇದ್ದವನು. ನನಗೆ ಅಧಿಕಾರದ ಆಸೆ ಇಲ್ಲ. ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಓದಿ:ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿಲ್ಲ, ಕಾಂಗ್ರೆಸ್ ಶಾಸಕರೇ ಬಿಜೆಪಿ ಸಂಪರ್ಕದಲ್ಲಿದ್ದಾರೆ : ನಳಿನ್ ಕುಮಾರ್ ಕಟೀಲ್

For All Latest Updates

TAGGED:

ABOUT THE AUTHOR

...view details