ಕರ್ನಾಟಕ

karnataka

ETV Bharat / state

ಆಯಾ ರಾಜ್ಯದ ಸಿಎಂಗಳ ಒಪ್ಪಿಗೆ ಪಡೆದು ಕಾರ್ಮಿಕರ ಸ್ಥಳಾಂತರಿಸಲು ಸರ್ಕಾರದ ನಿರ್ಧಾರ - Bangalore latest news

ಕಾರ್ಮಿಕರ ಪ್ರಯಾಣದ ವ್ಯವಸ್ಥೆ ಪರಿಶೀಲಿಸಲು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಎಸ್​.ಟಿ ಸೋಮಶೇಖರ್, ಗೋಪಾಲಯ್ಯ ಹಾಗೂ ತಾರಾ ಅನುರಾಧಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.

majestic
majestic

By

Published : May 5, 2020, 1:46 PM IST

ಬೆಂಗಳೂರು: ವಲಸೆ ಕಾರ್ಮಿಕರಿಗೆ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಅವರ ಊರುಗಳಿಗೆ ತೆರಳಲು ಸರ್ಕಾರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ.

ಕಾರ್ಮಿಕರ ಪ್ರಯಾಣದ ವ್ಯವಸ್ಥೆ ಪರಿಶೀಲಿಸಲು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಎಸ್​.ಟಿ. ಸೋಮಶೇಖರ್, ಗೋಪಾಲಯ್ಯ ಹಾಗೂ ತಾರಾ ಅನುರಾಧಾ ಇಂದು ಭೇಟಿ ನೀಡಿದ್ದಾರೆ. ಈ ವೇಳೆ ವೈದ್ಯಕೀಯ ಸಿಬ್ಬಂದಿ, ಸಾರಿಗೆ ಸಿಬ್ಬಂದಿ ಜತೆ ಮಾಹಿತಿ ಪಡೆದರು. ನಂತರ ಬಸ್​ನಲ್ಲಿರುವ ಪ್ರಯಾಣಿಕರಿಗೆ, ಬಸ್ ಚಾಲಕರಿಗೆ ನೀರಿನ ಬಾಟಲ್, ತಿಂಡಿ ವಿತರಣೆ ಮಾಡಿದರು.

ಮೆಜೆಸ್ಟಿಕ್​ಗೆ ಸಚಿವರ ಭೇಟಿ

ಬಳಿಕ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ಈಗಾಗ್ಲೇ 50 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಕಳುಹಿಸಲಾಗಿದೆ. ಇನ್ನೂ ಎರಡು ದಿನಗಳ ಕಾಲ ಉಚಿತ ಬಸ್ ವ್ಯವಸ್ಥೆ ವಿಸ್ತರಣೆ ಮಾಡಿದ್ದೇವೆ. ಇಂದು ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಜನ ಬಸ್ ಗಳಲ್ಲಿ ತಮ್ಮ ಊರಿಗೆ ತೆರಳುತ್ತಿದ್ದಾರೆ.

ಇನ್ನು ಹೊರ ರಾಜ್ಯಗಳ ವಲಸೆ ಕಾರ್ಮಿಕರನ್ನು ಕಳಿಸಿಕೊಡುವ ವಿಚಾರವಾಗಿ ಮಾತನಾಡಿ, ಆಯಾ ರಾಜ್ಯದ ಸಿಎಂಗಳಿಂದ ಸ್ಪಷ್ಟ ನಿಲುವು ಬರಬೇಕಿದೆ. ಆ ಬಳಿಕವಷ್ಟೇ ಅವರನ್ನು ಕಳುಹಿಸಿಕೊಡಲು ಸಾಧ್ಯ. ನಾವು ಕೂಡ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ, ನಮ್ಮ ರಾಜ್ಯದ ಜನ ಕೂಡ ಬೇರೆ ರಾಜ್ಯಗಳಲ್ಲೂ ಇದ್ದಾರೆ. ಅವರನ್ನೂ ಕರೆತರುವ ಪ್ರಯತ್ನ ಆಗುತ್ತಿದೆ ಎಂದರು.

ಸದ್ಯ ಹೊರರಾಜ್ಯದ ಕಾರ್ಮಿಕರನ್ನು ಬಸ್ ಮೂಲಕ ರೈಲ್ವೇ ನಿಲ್ದಾಣಕ್ಕೆ ತಲುಪಿಸಿ, ಅಲ್ಲಿಂದ ರೈಲಿನ ಮೂಲಕ ಕಳುಹಿಸಿ ಕೊಡಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 9 ಗಂಟೆಯಿಂದ ಸಂಜೆ 6ರ ತನಕ ಬಸ್ ಸಂಚಾರ ಇರಲಿದೆ. ಮೆಜೆಸ್ಟಿಕ್​ಗೆ ಇಂದು ಸಹ ಸಾವಿರಾರು ಕಾರ್ಮಿಕರು, ಜನರು ಬರುತ್ತಿದ್ದಾರೆ ಎಂದು ಹೇಳಿದರು.

ಬಾನುವಾರ ಒಟ್ಟು 500 ಬಸ್ಸುಗಳ ಮೂಲಕ ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿದೆ. ನಿನ್ನೆ 1,000 ಬಸ್ಸುಗಳ ಮೂಲಕ 30,000 ಕಾರ್ಮಿಕರನ್ನು ಸ್ಥಳಾಂತರಿಸಲಾಗಿತ್ತು. ಕಳೆದ ಮೂರು‌ ದಿನಗಳಿಂದ 59,880 ಕಾರ್ಮಿಕರ ಸ್ಥಳಾಂತರವಾಗಿದೆ.

ABOUT THE AUTHOR

...view details