ಬೆಂಗಳೂರು: ಸಿದ್ದರಾಮಯ್ಯ ಕ್ರಾಸ್ ಬೀಡ್ ಬಗ್ಗೆ ಮಾತನಾಡುತ್ತಾರೆ. ಇಂದಿರಾ ಗಾಂಧಿ ಮದುವೆ ಆಗಿದ್ಯಾರಿಗೆ?. ರಾಜೀವ್ ಗಾಂಧಿ ಕ್ರಾಸ್ ಬ್ರೀಡ್ ಅಂತ ಒಪ್ಕೊತಾರಾ ಸಿದ್ದರಾಮಯ್ಯ? ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕ್ರಾಸ್ ಬ್ರೀಡ್ ಅಂತ ಒಪ್ಕೊತಾರಾ?. ಲವ್ ಜಿಹಾದ್ ನಲ್ಲಿ ನಾಟಕ ಮಾಡಿ ಮೋಸ ಮಾಡಿ ವಿದೇಶಕ್ಕೆ ಹೆಣ್ಣು ಮಕ್ಕಳನ್ನು ಮಾರುತ್ತಿದ್ದಾರೆ. ಅಂತರ್ಜಾತಿ ವಿವಾಹಕ್ಕೆ ನಮ್ಮ ವಿರೋಧ ಇಲ್ಲ. ಆದರೆ ನಮ್ಮ ಮಕ್ಕಳು ಅವರ ಮಕ್ಕಳನ್ನು ಕಂಡೋರಿಗೆ ಮಾರೋದನ್ನು ಸಿದ್ದರಾಮಯ್ಯ ಒಪ್ಪುತ್ತಾರಾ?. ಪ್ರೀತಿ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಮಾರುತ್ತಾ ಇದ್ದಾರೆ ಎಂದು ಕಿಡಿ ಕಾರಿದರು.
600 ವರ್ಷದಿಂದ ಕ್ರಾಸ್ ಬ್ರೀಡ್ ಇದೆ ಅಂತ ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ಕ್ರಾಸ್ ಬ್ರೀಡ್ ಅನ್ನೋ ಪದ ಬಳಸೋದು ನಮ್ಮ ಸಂಸ್ಕೃತಿ ಅಲ್ಲ. ಅದು ನಾಯಿಗಳಿಗೆ ಬಳಕೆ ಮಾಡೋದು ಮನುಷ್ಯರಿಗೆ ಅಲ್ಲ ಎಂದು ವಾಗ್ದಾಳಿ ನಡೆಸಿದರು.