ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗಳಿಗೆ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ಖಾಸಗಿ ಆಸ್ಪತ್ರೆಯಲ್ಲಿ ಒಡಂಬಡಿಕೆ ಮಾಡಿಕೊಂಡು ಲಸಿಕೆ ತರಿಸಿಕೊಳ್ಳಲಿ. ಶಾಮನೂರು ಶಿವಶಂಕರಪ್ಪನವರು ತರಿಸಿಕೊಂಡು ಕೊಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕರು ಹಾಗೂ ಅಧ್ಯಕ್ಷರು ಆ ಕೆಲಸ ಮಾಡಲಿ. ನಾವೇನು ಹೇಳುವುದಿಲ್ಲ. ಆದಷ್ಟು ಬೇಗ ಜನರಿಗೆ ಲಸಿಕೆ ಸಿಗಬೇಕು ಎನ್ನುವುದು ಅಷ್ಟೇ ಮುಖ್ಯ ಎಂದರು.
ಅನ್‌ಲಾಕ್ ಬಗ್ಗೆ ಪ್ರಾಸ್ತಾವಿಕ ಚರ್ಚೆ:
ಸದಾಶಿವನಗರದ ತಮ್ಮ ನಿವಾಸದೆದುರು ಮಾಧ್ಯಮಗಳ ಜೊತೆ ಮಾತನಾಡಿ ಅನ್‌ಲಾಕ್ ಬಗ್ಗೆ ಪ್ರಾಸ್ತಾವಿಕವಾಗಿ ಚರ್ಚೆ ಮಾಡಬಹುದು. ಆದರೆ ಅಂತಿಮವಾಗಿ ನಿರ್ಧಾರವನ್ನು ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಈ ವರ್ಷದ ಅಂತ್ಯಕ್ಕೆ ಎಲ್ಲಾ ನಾಗರಿಕರಿಗೂ ಲಸಿಕೆ:
ಕೋವಿಡ್ ವಿಚಾರವಾಗಿ ಮಾಹಿತಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಈ ತಿಂಗಳಲ್ಲಿ ಖಾಸಗಿಯವರು 24,46,000 ಡೋಸ್ ವ್ಯಾಕ್ಸಿನ್ಗೆ ಬೇಡಿಕೆ ಇಟ್ಟಿದ್ದಾರೆ. 15,80,520 ಡೋಸ್ ವ್ಯಾಕ್ಸಿನ್ ಈಗಾಗಲೇ ಬಂದಿದೆ. ಈ ತಿಂಗಳಲ್ಲಿ 75 ರಿಂದ 80 ಲಕ್ಷ ಲಸಿಕೆ ನೀಡುತ್ತೇವೆ. ಇದುವರೆಗೂ 1.55 ಕೋಟಿ ಲಸಿಕೆ ನೀಡಲಾಗಿದೆ. ಈ ತಿಂಗಳು ಕನಿಷ್ಠ 80 ಲಕ್ಷ ಲಸಿಕೆ ನೀಡಿ ಈ ವರ್ಷದ ಅಂತ್ಯದೊಳಗೆ ಪ್ರತಿ ವ್ಯಕ್ತಿಗೆ ಎರಡು ಡೋಸ್ ಲಸಿಕೆ ಹಾಕಿಸಲಾಗುವುದು ಎಂದು ಭರವಸೆ ನೀಡಿದರು.
ಮೂರನೇ ಅಲೆಯ ಕುರಿತು ಚರ್ಚೆ:
ಎರಡೂವರೆಗೆ ಟಾಸ್ಕ್ ಫೋರ್ಸ್ ಸಭೆ ಇದೆ. ಮೂರನೇ ಅಲೆಯ ಕುರಿತು ಚರ್ಚೆ ಆಗಲಿದೆ. ದೇವಿ ಪ್ರಸಾದ್ ಶೆಟ್ಟಿಯವರ ವರದಿ ಸಿದ್ಧವಿದ್ದರೆ ಚರ್ಚೆ ನಡೆಸುತ್ತೇವೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ:ಸಿಎಂ ಬದಲಾವಣೆ ವಿಚಾರವಾಗಿ ಯಾವುದೇ ಸಹಿ ಸಂಗ್ರಹ ನಡೆಯುತ್ತಿಲ್ಲ: ಪ್ರಹ್ಲಾದ್ ಜೋಶಿ