ಬೆಂಗಳೂರು:ರಾಜಕಾರಣಕ್ಕಾಗಿ ಕೆಲವರನ್ನು ತುಷ್ಟೀಕರಣ ಮಾಡಲು ಆರ್ಎಸ್ಎಸ್ ಅನ್ನು ದೂಷಿಸುವುದು ಕೆಲವು ರಾಜಕಾರಣಿಗಳ ಚಾಳಿಯಾಗಿದೆ. ಈಗ ಉಪಚುನಾವಣೆಗಳು ಹತ್ತಿರವಿರುವುದರಿಂದ ಕುಮಾರಸ್ವಾಮಿಯವರಿಗೂ ಈ ಚಾಳಿ ಕಾಡುತ್ತಿರಬಹುದು ಎಂದು ಸಚಿವ ಸಿ.ಸಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.
'ಕುಮಾರಸ್ವಾಮಿಯವರೇ, ಆರ್ಎಸ್ಎಸ್ ಕೊಟ್ಯಂತರ ಜನರಿಗೆ ದೇಶ ಸೇವೆಯ ಬಗ್ಗೆ ಮತ್ತು ಆಪತ್ತಿನ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸೇವೆ ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಪಾಠ ಹೇಳಿಕೊಟ್ಟಿದೆಯೇ ವಿನಹ, ಎಂದಿಗೂ ವಂಶಪಾರಂಪರ್ಯ ಅಥವಾ ಕುಟುಂಬ ರಾಜಕಾರಣವನ್ನು ಬೋಧಿಸಿಲ್ಲ.