ಬೆಂಗಳೂರು:ಕಾಂಗ್ರೆಸ್ ಪಕ್ಷವು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು, ಪ್ರಸ್ತುತ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂದು ಕಪೋಲಕಲ್ಪಿತವಾಗಿ ವದಂತಿ ಹಬ್ಬಿಸುವಲ್ಲಿ ನಿರತವಾಗಿದೆ. ಇದು ಆ ಪಕ್ಷದ ಹತಾಶೆಯನ್ನು ತೋರಿಸುತ್ತದೆ ಎಂದು ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದರು.
ಪದೇ ಪದೇ ತಮ್ಮಿಷ್ಟಕ್ಕೆ ಸಿಎಂ ಸ್ಥಾನ ಬದಲಾಯಿಸುವ ಚಾಳಿ ಇರುವುದು ಕಾಂಗ್ರೆಸ್ನ ಹೈಕಮಾಂಡ್ನಲ್ಲಿ ಎಂಬುದನ್ನು ಕಾಂಗ್ರೆಸ್ನವರು ಮೊದಲು ನೆನಪು ಮಾಡಿಕೊಳ್ಳಲಿ. ಜನಪರ ಆಡಳಿತ ನೀಡುತ್ತಾ ಒಂದು ವರ್ಷದ ಆಡಳಿತವನ್ನು ಬೊಮ್ಮಾಯಿ ಅವರು ಸಮರ್ಥವಾಗಿ ನೀಡಿದ್ದಾರೆ. ಅಲ್ಲದೇ ಮುಂದೆಯೂ ಸುಭದ್ರ ಸರ್ಕಾರವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಕಾಂಗ್ರೆಸ್ನವರಿಗೆ ಹಗಲುಗನಸು ಬೇಡ ಎಂದು ಟೀಕಿಸಿದ್ದಾರೆ.