ಕರ್ನಾಟಕ

karnataka

ETV Bharat / state

ಬೆಂಗಳೂರು: ನವೆಂಬರ್ 18 ರಿಂದ ಮೆಟ್ರೋ ರೈಲು ಓಡಾಟದಲ್ಲಿ ಬದಲಾವಣೆ

ವಾರದ ದಿನಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲನೇ ಮೆಟ್ರೋ ರೈಲು ಸೇವೆಯು ಬೆಳಗ್ಗೆ 06:00 ಗಂಟೆಗೆ ಮತ್ತು ಭಾನುವಾರದಂದು ಬೆಳಗ್ಗೆ 07:00 ಗಂಟೆಗೆ ಹೊರಡಲಿದೆ.

ಮೆಟ್ರೋ ರೈಲು
ಮೆಟ್ರೋ ರೈಲು

By

Published : Nov 16, 2021, 9:05 PM IST

ಬೆಂಗಳೂರು: ನಮ್ಮ ಮೆಟ್ರೋ ರೈಲು ಸೇವೆಗಳ ಕಾರ್ಯಾಚರಣೆಯ ಸಮಯವು ನವೆಂಬರ್ 18 ರಿಂದ ಬದಲಾವಣೆ ಆಗಲಿದೆ. ವಾರದ ದಿನಗಳಲ್ಲಿ ಸೋಮವಾರ ದಿಂದ ಶನಿವಾರದವರೆಗೆ ಎಲ್ಲಾ ಟರ್ಮಿನಲ್ ನಿಲ್ದಾಣಗಳಾದ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲನೇ ಮೆಟ್ರೋ ರೈಲು ಸೇವೆಯು ಬೆಳಗ್ಗೆ 06:00 ಗಂಟೆಗೆ ಮತ್ತು ಭಾನುವಾರದಂದು ಬೆಳಗ್ಗೆ 07:00 ಗಂಟೆಗೆ ಹೊರಡಲಿದೆ.

ಹಾಗೇ ಎಲ್ಲಾ ದಿನಗಳಲ್ಲಿ ಕೊನೆಯ ಮೆಟ್ರೋ ರೈಲು ಸೇವೆಯು ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಕಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ಹೊರಡಲಿದೆ. ಆದಾಗ್ಯೂ, ಎಲ್ಲಾ ದಿನಗಳಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ಮೆಟ್ರೋ ರೈಲು ರಾತ್ರಿ 11:30 ಗಂಟೆಗೆ ಹೊರಡಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಮಯವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details