ಬೆಂಗಳೂರು:ಸಾರಿಗೆ ನೌಕರರ ಮುಷ್ಕರವನ್ನು ಗಮನದಲ್ಲಿ ಇರಿಸಿಕೊಂಡು ಸಾರ್ವಜನಿಕರಿಗೆ ಅನಾನುಕೂಲತೆ ತಗ್ಗಿಸಲು ನಮ್ಮ ಮೆಟ್ರೋ ತನ್ನ ಎಲ್ಲಾ 50 ರೈಲುಗಳನ್ನು ಇಂದಿನಿಂದ ಜನದಟ್ಟಣೆ ಅವಧಿಯಲ್ಲಿ ಹಾಗೂ ಜನನಿಬಿಡ ಅವಧಿಯಲ್ಲಿ ರೈಲುಗಳ ಅಂತರವನ್ನು ತಗ್ಗಿಸುವ ಮೂಲಕ ತನ್ನ ಕಾರ್ಯ ನಿರ್ವಹಿಸಲಿದೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ, ಅನಿರ್ದಿಷ್ಟಾವಧಿ ಮುಷ್ಕರವನ್ನು ಸಾರಿಗೆ ನೌಕರರು ನಡೆಸುತ್ತಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಿಗಮಗಳ ಬಸ್ಗಳ ಸೇವೆ ಸ್ಥಗಿತಗೊಂಡಿದೆ.